×
Ad

ಸುಲ್ತಾನ್ ಡೈಮಂಡ್ ಆ್ಯಂಡ್‌ ಗೋಲ್ಡ್ ಸಂಸ್ಥೆಯಿಂದ ಮಹಿಳಾ ಸಾಧಕಿಯರಿಗೆ ‘ಸುಲ್ತಾನ್ ನಾರಿ ಶಕ್ತಿ’ ಪ್ರಶಸ್ತಿ

Update: 2018-03-08 23:34 IST

ಮಂಗಳೂರು, ಮಾ. 8: ಸುಲ್ತಾನ್ ಡೈಮಂಡ್ ಆ್ಯಂಡ್‌ಗೋಲ್ಡ್ ಸಂಸ್ಥೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮೂವರು ಮಹಿಳಾ ಸಾಧಕಿಯರಿಗೆ ‘ಸುಲ್ತಾನ್ ನಾರಿ ಶಕ್ತಿ 2018’ ಪ್ರಶಸ್ತಿ ಪ್ರದಾನ ನಗರದ ಸಂಸ್ಥೆಯ ಮಳಿಗೆಯಲ್ಲಿ ಗುರುವಾರ ನಡೆಯಿತು.

ಸಾಮಾಜಿಕ ಕಾರ್ಯಕರ್ತೆ ಖೈರುನ್ನಿಸಾ ಸೈಯದ್ (ಮಹಿಳಾ ಸಬಲೀಕರಣ) ಮತ್ತು ಕ್ರಿಮಿನಲ್ ವಕೀಲೆ ಎಲಿಜೆಬತ್ ನೀಲಿಯಾರ (ಕಾನೂನು) ಅವರಿಗೆ ‘ಸುಲ್ತಾನ್ ನಾರಿ ಶಕ್ತಿ 2018’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉದ್ಯಮ ಕ್ಷೇತ್ರದಲ್ಲಿ ಲಕ್ಷ್ಮೀ ಮಂಜುನಾಥ ರಾವ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮುಖ್ಯ ಅತಿಥಿ ನಝ್ರೀನ್ ಯೆನೆಪೋಯ ಪ್ರಸ್ತಿ ಪ್ರದಾನ ಮಾಡಿದರು. ಸುಲ್ತಾನ್ ಡೈಮಂಡ್ ಆ್ಯಂಡ್‌ಗೋಲ್ಡ್ ಸಂಸ್ಥೆಯ ಅಧ್ಯಕ್ಷ, ಆಡಳಿತ ನಿರ್ದೇಶಕ ಡಾ.ಟಿ.ಎಂ.ಅಬ್ದುಲ್ ರವೂಫ್ ಅವರ ಪತ್ನಿ ಮೆಹರುನ್ನಿಸಾ ರವೂಫ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ.ಅಬ್ದುಲ್ ರಹೀಂ ಅವರ ಪತ್ನಿ ತಹ್ಸಿನ್ ರಹೀಂ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖೈರುನ್ನಿಸಾ ಸೈಯ್ಯದ್, ಸುಲ್ತಾನ್ ಆಭರಣ ಸಂಸ್ಥೆಯು ಗುಣಮಟ್ಟ ಕಾಯ್ದುಕೊಳ್ಳುವುದರೊಂದಿಗೆ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹಿಳಾ ಸಾಧಕರನ್ನು ಗುರುತಿಸಿರುವುದನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ಅತಿಥಿಗಳು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಕೇಕ್ ಕತ್ತರಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಸುಲ್ತಾನ್ ಡೈಮಂಡ್ ಆ್ಯಂಡ್‌ಗೋಲ್ಡ್ ಸಮೂಹ ಸಂಸ್ಥೆಯ ಜನರಲ್ ಮ್ಯಾನೇಜರ್ ಎ.ಕೆ.ಉಣ್ಣಿತ್ತನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರ್ಕೆಟಿಂಗ್ ಮ್ಯಾನೇಜರ್ ಆಸಿಫ್ ಇಕ್ಬಾಲ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News