×
Ad

ಅಲ್ ಮದೀನ ‘ವಿಪಿಎಸ್’ ಶಾಲಾ ಕಟ್ಟಡ ಉದ್ಘಾಟನೆ

Update: 2018-03-08 23:39 IST

ನರಿಂಗಾನ, ಮಾ. 8: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಶಾಲಾ ಕ್ಯಾಂಪಸಿನಲ್ಲಿ, ಅಬುಧಾಬಿಯ ಖ್ಯಾತ ಉದ್ಯಮಿ ಡಾ. ಶಮ್ಸೀರ್ ವಯಲಿಲ್ ನೇತೃತ್ವದ ‘ವಿಪಿಎಸ್’ ಹೆಲ್ತ್ ಕೇರ್ ಸಂಸ್ಥೆ ಪ್ರಾಯೋಜಿತ, ಮರ್ಹೂಂ ಹಾಜಿ ಯುಟಿ ಫರೀದ್ ಸ್ಮರಣಾರ್ಥ ನಿರ್ಮಿತ ಶಾಲಾ ಕಟ್ಟಡವನ್ನು ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ನೇತೃತ್ವದಲ್ಲಿ ದೇರಳಕಟ್ಟೆ ಯೆನೆಪೊಯ ಮೆಡಿಕಲ್ ಯೂನಿವರ್ಸಿಟಿಯ ಕುಲಾಧಿಪತಿ ಹಾಜಿ ಯೆನೆಪೊಯ ಅಬ್ದುಲ್ಲ ಕುಂಞಿ  ಉದ್ಘಾಟಿಸಿದರು.

 ಸಚಿವ ಯು.ಟಿ. ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಪಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ, ವಿಪಿಎಸ್ ಗ್ರೂಪಿನ ಭಾರತೀಯ ನಿರ್ದೇಶಕ ಹಾಫಿರ್ ಅಲಿ ಕೋಝಿಕ್ಕೋಡ್, ವ್ಯವಸ್ಥಾಪಕ ಸಫರ್ ಕೋಝಿಕ್ಕೋಡ್, ರಾಜೀವ್ ಗಾಂಧಿ ಮೆಡಿಕಲ್ ಯೂನಿವರ್ಸಿಟಿಯ ಸೆನೆಟ್ ಸದಸ್ಯ ಡಾ. ಇಫ್ತಿಕಾರ್ ಅಲಿ ಮಂಗಳೂರು, ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಸಾದು ಕುಂಞಿ ಮಾಸ್ಟರ್, ಹಾಜಿ ಎನ್.ಎಸ್.ಕರೀಂ, ಆರ್.ಕೆ. ಇಬ್ರಾಹೀಂ ಹಾಜಿ ಮುಂಬೈ, ಶಾಲಾ ಸಂಚಾಕ ಹಾಜಿ ಅಬ್ದುಲ್ಲ ಮೋರ್ಲ, ಸಿದ್ದೀಕ್ ಮುಸ್ಲಿಯಾರ್ ಬಹ್ರೈನ್, ಹಾಫಿರ್ ಅಬ್ದುಸಲಾಂ ಚೆನ್ನಾರ್, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಅಸೈ, ಉಪಾಧ್ಯಕ್ಷ ಕುಂಞಿ ಬಾವ ಹಾಜಿ ಕಲ್ಲಟ್ಟ, ವಕ್ಫ್ ಜಿಲ್ಲಾ ಉಪಾಧ್ಯಕ್ಷ ಹಾಜಿ ಬಾವ ನೆಕ್ಕರೆ, ವಕ್ಫ್ ಅಧಿಕಾರಿ ಅಬೂಬಕರ್ ಹಾಜಿ, ಕೆ.ಎಂ.ಕೆ. ಮಂಜನಾಡಿ, ಹೈದರ್ ಮೋಂಟುಗೋಳಿ, ಏಶಿಯನ್ ಬಾವ ಹಾಜಿ, ಶೌಕತ್ ಹಾಜಿ ದೇರಳಕಟ್ಟೆ, ಎನ್.ಎಸ್.ಮಹ್ಮೂದ್ ಹಾಜಿ, ಹಮೀದ್ ಹಾಜಿ ದೇರಳಕಟ್ಟೆ,ಪಿ.ಟಿ.ಎ. ಉಪಾಧ್ಯಕ್ಷ ಪಿ.ಕೆ. ಮೊಯ್ದಿನ್, ಅಬೂಸಾಲಿಹ್ ಮೋರ್ಲ, ಹನೀಫ್ ಹಾಜಿ ಉಳ್ಳಾಲ, ಅಶ್ರಫ್ ಹಾಜಿ ಉಳ್ಳಾಲ, ಅಲ್ ಮದೀನ ಶಾಲಾ ಮುಖ್ಯೋಪಾಧ್ಯಾಯರಾದ ಹನೀಫ್ ಮಾಸ್ಟರ್, ಹಾರಿಸ್ ಮಾಸ್ಟರ್, ಮುಹಮ್ಮದ್ ಮಾಸ್ಟರ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಮತ್ತು ಅಬ್ದುರ್ರಝಾಕ್ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಮುಹಮ್ಮದ್ ಕುಂಞಿ ಅಮ್ಜದಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News