×
Ad

ಬಂಟ್ವಾಳ: ಝರೀನಾಗೆ ಸಿಎಫ್‌ಐ ಸನ್ಮಾನ

Update: 2018-03-08 23:43 IST

ಬಂಟ್ವಾಳ, ಮಾ. 8: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿನಿ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಕಾಂ. ಸ್ನಾತಕೋತ್ತರದಲ್ಲಿ 2 ಚಿನ್ನದ ಪದಕಗಳನ್ನು ಪಡೆದಿರುವ ಬಂಟ್ವಾಳದ ಮಂಡಾಡಿಯ ಝರೀನಾ ಬಾನು ಅವರ ಮನೆಗೆ ಗುರುವಾರ ಸಿಎಫ್‌ಐ ನಿಯೋಗ ಭೇಟಿ ನೀಡಿತು.

ಇದೇ ವೇಳೆ ಝರೀನಾ ಬಾನು ರನ್ನು ಸಿಎಫ್‌ಐ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಉಪಾಧ್ಯಕ್ಷೆ ಮುರ್ಶಿದಾ, ಸದಸ್ಯೆ ಸಫ್ರೀನಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News