×
Ad

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಕೊಲೆ ಯತ್ನ: ಜೆಡಿಎಸ್ ಖಂಡನೆ

Update: 2018-03-08 23:51 IST
ಇಕ್ಬಾಲ್ ಅಹ್ಮದ್ ಮುಲ್ಕಿ

ಮುಲ್ಕಿ, ಮಾ. 8: ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿಯೇ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರ ಮೇಲೆ ಚಾಕುವಿನಿಂದ ತೀವ್ರವಾಗಿ ಹಲ್ಲೆ ನಡೆಸಿ, ಕೊಲೆ ಯತ್ನ ನಡೆಸಿದ್ದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದು ಇಕ್ಬಾಲ್ ಅಹ್ಮದ್ ಮುಲ್ಕಿ ತಿಳಿಸಿದ್ದಾರೆ.

ಸಾಂವಿಧಾನಿಕ ಉನ್ನತ ಹುದ್ದೆಯಾಗಿರುವ ಲೋಕಾಯುಕ್ತದ ನ್ಯಾಯಮೂರ್ತಿಗಳ ಮೇಲೆ ಕಚೇರಿಯೊಳಗೆಯೇ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಯತ್ನವು ರಾಜ್ಯದ ಕಾನೂನು ಸುವ್ಯವಸ್ಥೆ ಎಷ್ಟು ಭದ್ರವಾಗಿದೆಯೆಂದು ತಿಳಿಸುತ್ತೆ. ಉನ್ನತ ಅಧಿಕಾರಿಯೋರ್ವರ ಮೇಲೆಯೇ ಮಾರಕ ಆಯುಧದೊಂದಿಗೆ ಸುಲಲಿತವಾಗಿ ಹಾಡುಹಗಲೇ ಎಲ್ಲಾ ಭದ್ರತಾ ತಪಾಸಣಾ ಕೇಂದ್ರವನ್ನು ದಾಟಿ ಈ ರೀತಿಯಲ್ಲಿ ಘಟನೆ ನಡೆಯುವುದಾದರೆ ಜನಸಾಮಾನ್ಯರ ಪಾಡೇನು ಎಂದು  ಜನತೆ ಚಿಂತಿಸುವಂತಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನನಿತ್ಯ ಒಂದು ನಿರ್ದಿಷ್ಟ ಸಮುದಾಯವನ್ನು ಗುರುತಿಸಿ ಭದ್ರತೆಯ ನೆಪದಲ್ಲಿ ಭದ್ರತಾ ಅಧಿಕಾರಿಗಳು ನಡೆಸುವ ತನಿಖೆ, ಕೊಡುವ ಮಾನಸಿಕ ಹಿಂಸೆ ಹಾಗು ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಕೂಡ ನೀಡುವ ಕಿರುಕುಳ, ತೊಂದರೆಗಳು ಒಂದು ಕಡೆಯಾದರೆ ಇನ್ನೊಂದೆಡೆ ಹಾಡುಹಗಲೇ ರಾಜ್ಯದಲ್ಲಿ ನಡೆಯುವ ಕೊಲೆ, ಕೊಲೆ ಯತ್ನ, ರಾಜ್ಯ ಯಾವ ದಿಕ್ಕಿನಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂಬುವುದನ್ನ ತಿಳಿಸುತ್ತಿದೆ.

ಭದ್ರತಾ ತಪಾಸಣೆ ಕೇವಲ ಒಂದು ನಿರ್ದಿಷ್ಟ ಸಮುದಾಯವನ್ನು ಗುರುತಿಸಿ ನಡೆಸುವಂತದ್ದೇ ? ಇದು ಇತರ ಸಮುದಾಯದ ವ್ಯಕ್ತಿಗಳ ಮೇಲೆ ಲಾಗುವಾಗುವುದಿಲ್ಲವೇ ಎಂದು ರಾಷ್ಟ್ರ ಹಾಗು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಸರ್ಕಾರಗಳು ಹೇಳಬೇಕಿದೆ. ಲೋಕಾಯುಕ್ತರ ಕೊಲೆಯತ್ನವನ್ನು ಜೆಡಿಎಸ್ ಖಂಡಿಸುತ್ತೆ ಮತ್ತು ಇದರ ಹಿಂದಿರುವ ಕೈಗಳನ್ನು ಸೂಕ್ತ ತನಿಖೆ ನಡೆಸಿ ಪತ್ತೆ ಹಚ್ಚಬೇಕು ಮತ್ತು ರಾಜ್ಯದ ಕಾನೂನು ಸುವವ್ಯಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈ ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಿ  ಚುನಾವಣೆಯನ್ನೆದುರಿಸಬೇಕೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ, ದ.ಕ.ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಹೆಚ್.ಕಾರ್ನಾಡ್, ರಾಜ್ಯ ಕಾರ್ಯದರ್ಶಿ ಹರೀಶ್ ಪುತ್ರನ್, ಮುಲ್ಕಿ ವಲಯಾಧ್ಯಕ್ಷ ಜೀವನ್ ಕೆ.ಶೆಟ್ಟಿ  ಆ.ಸ.ಘಟಕದ ನಿಸಾರ್ ಅಹ್ಮದ್ ಹಾಗು ಮುಲ್ಕಿ ವಲಯ ಕಾರ್ಯದರ್ಶಿ ನವೀನ ಪುತ್ರನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News