ಮಾ. 11: ಬಜ್ಪೆ ಸೌಹಾರ್ದ ನಗರದಲ್ಲಿ ಮಸೀದಿ ಉದ್ಘಾಟನೆ
Update: 2018-03-09 17:46 IST
ಮಂಗಳೂರು, ಮಾ.9: ಬಜ್ಪೆ ಸೌಹಾರ್ದ ನಗರದ ಮಸ್ಜಿದುರ್ರಹ್ಮಾನ್‌ನ ಉದ್ಘಾಟನೆಯು ಮಾ.11ರಂದು ಸಂಜೆ 6ಕ್ಕೆ ನಡೆಯಲಿದೆ. ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಾಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮಸೀದಿ ಉದ್ಘಾಟಿಸಲಿದ್ದು, ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಆಲಿಕುಂಞಿ ಉಸ್ತಾದ್ ಶಿರಿಯಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಇಹ್ಸಾನ್ ಕರ್ನಾಟಕ ಇದರ ಅಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ, ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಪ್ರಭಾಷಣಗೈಯಲಿ ದ್ದಾರೆ ಎಂದು ಪ್ರಕಟನೆ ತಿಳಿಸಿದೆ.