ಕೊಡವೂರು: ಅಶಾಂತಿ ಸೃಷ್ಠಿಸುವ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಡಿಸಿಗೆ ಮನವಿ
ಉಡುಪಿ, ಮಾ.9: ಮಲ್ಪೆ ಕೊಡವೂರು ಗ್ರಾಮದ ಪಲ್ಲಿಜೆಡ್ಡಾ ಎಂಬಲ್ಲಿರುವ ಕಲಾಮತ್ ಮಸೀದಿ ವಠಾರದಲ್ಲಿ ಅಶಾಂತಿ ಉಂಟು ಮಾಡುವ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕೆಲವೊಂದು ಮತಾಂಧ ಶಕ್ತಿಗಳು ಮಸೀದಿಗೆ ಬರುವ ಭಕ್ತರಿಗೆ ತೊಂದರೆ ನೀಡಿ ಪರಿಸರದಲ್ಲಿ ಅಶಾಂತಿ ಉಂಟು ಮಾಡುವ ದುರುದ್ದೇಶದಿಂದ ಮಸೀದಿ ವಠಾರದಲ್ಲಿ ಭೂತದ ಕೋಲ ಕಾರ್ಯಕ್ರಮವನ್ನು ಮಾ.10ರಂದು ಮಾಡುವುದಾಗಿ ದೊಡ್ಡ ಫಲಕ ಹಾಕಿದ್ದು, ಅಕ್ಕಪಕ್ಕದ ಜಾಗದಲ್ಲಿದ್ದ ಮರ ಗಿಡಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈವರೆಗೆ ಈ ರೀತಿಯ ಕಾರ್ಯಕ್ರಮ ಈ ಪ್ರದೇಶದಲ್ಲಿ ನಡೆದಿಲ್ಲ. ಇದನ್ನು ಪ್ರಥಮ ಬಾರಿಗೆ ಮಾಡುತ್ತಿದ್ದಾರೆ. ಆದುದರಿಂದ ಧಾರ್ಮಿಕ ಸ್ಥಳವಾಗಿ ರುವ ಮಸೀದಿಗೆ ನಮಾಝ್‌ಗೆ ಬರುವವರಿಗೆ ತೊಂದರೆ ಉಂಟು ಮಾಡುವ ಇಂತಹ ಕಾನೂನು ಬಾಹಿರ ಮತ್ತು ಪರಿಸರದಲ್ಲಿ ಅಶಾಂತಿ ಹುಟ್ಟು ಹಾಕುವ ಕಾರ್ಯ ಕ್ರಮಕ್ಕೆ ಅನುಮತಿ ನೀಡಬಾರದು ಎಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ.