×
Ad

ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ

Update: 2018-03-09 22:36 IST

ಉಡುಪಿ, ಮಾ. 9: ಓಂ ಫ್ರೆಂಡ್ಸ್ ಕುಂದಾಪುರ ಇದರ ವತಿಯಿಂದ ಕಿಶೋರ್ ಶೆಟ್ಟಿ ಮತ್ತು ಸಚಿನ್ ಶೆಟ್ಟಿ ಸ್ಮರಣಾರ್ಥ ರಾಜ್ಯ ಮಟ್ಟದ ರಸಪ್ರಸ್ನೆ ಕಾರ್ಯಕ್ರಮ ಮಾ.11ರಂದು  ಬೆಳಗ್ಗೆ 10 ಗಂಟೆಗೆ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 20,000 ರೂ ನಗದು ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನಿಗೆ 10,000 ರೂ ನಗದು ಮತ್ತು ಶಾಶ್ವತ ಫಲಕವನ್ನು ನೀಡಲಾಗುವುದು ಎಂದು ಓಂ ಫ್ರೆಂಡ್ಸ್‌ನ ಹರೀಶ್‌ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News