×
Ad

ಯುನಿವೆಫ್: ಕೃಷ್ಣಾಪುರದಲ್ಲಿ ಸಂವಾದ ಕಾರ್ಯಕ್ರಮ

Update: 2018-03-10 20:31 IST

ಮಂಗಳೂರು, ಮಾ. 10 ಯುನಿವೆಫ್ ಕರ್ನಾಟಕ ಇತ್ತೀಚೆಗೆ ಕೃಷ್ಣಾಪುರದ ಪ್ಯಾರಡೈಸ್ ಕ್ಲಬ್‌ನಲ್ಲಿ “ಮುಸ್ಲಿಮರ ಈಗಿನ ಸಮಸ್ಯೆಗಳು ಮತ್ತು ಪರಿಹಾರ” ಎಂಬ ವಿಷಯದಲ್ಲಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

“ಸಮುದಾಯದ ಹೊಣೆಗಾರಿಕೆ ಹಾಗೂ ಸಬಲೀಕರಣದ ಕನಸು ಮತ್ತು ಸಾಂಘಿಕ ನಿರ್ವಹಣೆ” ಕುರಿತು ಯುನಿವೆಫ್ ನ ರಫೀಉದ್ದೀನ್ ಕುದ್ರೋಳಿ ಸಂವಾದ ನಡೆಸಿದರು. ಸಂವಾದದಲ್ಲಿ ಪ್ರಸಕ್ತ ಮುಸ್ಲಿಮರ ಸ್ಥಿತಿಗತಿಗಳು, ಸಮುದಾಯದ ಸಬಲೀಕರಣದ ಮಾರ್ಗೋಪಾಯಗಳ ಕುರಿತು ಅಂಕಿ ಅಂಶಗಳ ಸಮೇತ ವಿಸ್ತೃತ ಚರ್ಚೆ ನಡೆಸಲಾಯಿತು. ಸಮಸ್ಯೆಗಳ ಪ್ರತಿಯೊಂದು ಆಯಾಮಗಳ ಸಮಗ್ರ ಅವಲೋಕನ ನಡೆಸಲಾಯಿತು. ಪ್ರಸಕ್ತ ರಾಜಕೀಯ ಸನ್ನಿವೇಶ, ಮುಸ್ಲಿಮ್ ಐಕ್ಯತೆ, ಕೋಮುವಾದದ ಅಪಾಯದ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಯಿತು.

ಯುನಿವೆಫ್ ಜಿಲ್ಲಾಧ್ಯಕ್ಷ ಮುಹಮ್ಮದ್ ಸೈಫುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿನ ಎಲ್ಲ ಕ್ರಾಂತಿಗಳ ಹಿಂದೆ ಯುವಕರ ಪಾತ್ರ ಬಹಳ ಪ್ರಮುಖ. ಯುವಕರು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಿದರೆ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಎಂದರು. ಮಂಗಳೂರು ಶಾಖೆಯ ಅಧ್ಯಕ್ಷ ನೌಫಲ್ ಹಸನ್‌ರ ಕಿರ್‌ಅತ್‌ನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕುದ್ರೋಳಿ ಶಾಖೆಯ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಚಾಲಕ ಹುದೈಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲ ಶಾಖೆಯ ಅಧ್ಯಕ್ಷ ಬಿ.ಎಂ. ಬದ್ರುದ್ದೀನ್ ವಂದಿಸಿದರು.

ಸ್ಥಳೀಯರಾದ ಅಬ್ದುಲ್ ಖಾದರ್ ಮತ್ತು ಪ್ಯಾರಡೈಸ್ ಕ್ಲಬ್ ಸದಸ್ಯ ಇಫ್ತಿಕಾರ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News