ಮಾ.12: ಮುರ್ಡೇಶ್ವರದಲ್ಲಿ ಲವಕುಶ ಯಕ್ಷಗಾನ ಪ್ರಸಂಗ
ಭಟ್ಕಳ, ಮಾ. 10: ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ, ಮುರ್ಡೇಶ್ವರ ಬಸ್ತಿಮಕ್ಕಿ ಹೆರಾಳಿ ಇದರ ಪ್ರಥಮ ವರ್ಷದ ವರ್ಧಂತಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶ್ರೀ ಮಹಿಷಾಸುರಮರ್ಧಿನಿ ಯಕ್ಷಕಲಾ ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿರದ ಕೂಡುವಿಕೆಯಿಂದ ಪೌರಾಣಿಕ ಯಕ್ಷಗಾನ "ಲವಕುಶ" ಮಾ.12ರಂದು ಸಂಜೆ 7.30 ರಿಂದ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ, ಕೊಳಗಿ, ಮೃದಂಗದಲ್ಲಿ ನರಸಿಂಹ ಹೆಗಡೆ, ಮೂರೂರು, ಚಂಡೆಯಲ್ಲಿ ಕು. ರಾಮನ್ ಹಾಗೂ ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಶ್ರೀಪಾದ ಹೆಗಡೆ ಹಡಿನಬಾಳ್, ಈಶ್ವರ ನಾಯ್ಕ ಮಂಕಿ, ಶ್ರೀಧರ ಹೆಗಡೆ ಚಪ್ಪರಮನೆ, ಸುಬ್ರಾಯ ಭಟ್ ಶಿರಾಣಿ, ಮಂಜು ಹವ್ಯಕ, ಗಣಪತಿ ಹೆಗಡೆ ಕೊಂಡದಕುಳಿ, ನಾಗರಾಜ ಮಧ್ಯಸ್ಥ, ನಾರಾಯಣ ಮಧ್ಯಸ್ಥ, ಮಂಜುನಾಥ ಭಟ್ ಗೋಳಿಕುಂಬ್ರಿ, ವಿನಾಯಕ ಮಧ್ಯಸ್ಥ , ವಿವೇಕ ಮಧ್ಯಸ್ಥ ಮುಂತಾದವರಿದ್ದಾರೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.