×
Ad

ಜೈನಮುನಿಗಳಿಂದ ಸ್ವಾಗತ, ಕ್ಯಾಥೊಲಿಕ್ ಚರ್ಚ್‌ನ ಟೀಕೆ

Update: 2018-03-10 21:12 IST

ಹೊಸದಿಲ್ಲಿ,ಮಾ.10: ದಯಾಮರಣ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಪ್ರಕಟಿಸಿರುವ ಐತಿಹಾಸಿಕ ತೀರ್ಪನ್ನು ವೈದ್ಯ ಸಮುದಾಯ ಮತ್ತು ಹಿರಿಯ ಜೈನಮುನಿ ತರುಣ ಸಾಗರ್ ಅವರು ಸ್ವಾಗತಿಸಿದ್ದರೆ, ಕ್ಯಾಥೋಲಿಕ್ ಚರ್ಚ್ ಕಟುವಾಗಿ ಟೀಕಿಸಿದೆ. ಬದುಕು ದೇವರ ಕೈಗಳಲ್ಲಿದೆ ಮತ್ತು ಸಹಾನುಭೂತಿಯ ಹೆಸರಿನಲ್ಲಿ ವೃದ್ಧಾಪ್ಯ ಅಥವಾ ಅನಾರೋಗ್ಯದಿಂದ ನರಳುತ್ತಿರುವ ವ್ಯಕ್ತಿಯನ್ನು ಕೊಲ್ಲುವುದಕ್ಕೆ ಅವಕಾಶ ನೀಡಿರುವ ಈ ತೀರ್ಪು ಮಾನವೀಯತೆಯಲ್ಲಿ ನಂಬಿಕೆಯನ್ನಿಟ್ಟಿರುವವರಿಗೆ ಸುತರಾಂ ಸ್ವೀಕಾರಾರ್ಹ ವಲ್ಲ ಎಂದು ಅದು ಹೇಳಿದೆ.

ಘನತೆಯಿಂದ ಸಾಯುವುದು ವ್ಯಕ್ತಿಯ ಮೂಲಭೂತ ಹಕ್ಕು ಎನ್ನುವುದನ್ನು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು, ಯಾವುದೇ ವ್ಯಕ್ತಿಯು ಗುಣವಾಗದ ಕಾಯಿಲೆಯಿಂದ ಮರಣಾಸನ್ನನಾದ ಅಥವಾ ಪುನಃಶ್ಚೇತನದ ಸಾಧ್ಯತೆಯಿಲ್ಲದ ಕೋಮಾದಂತಹ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಕೃತಕ ಜೀವರಕ್ಷಕ ವೈದ್ಯಕೀಯ ಸವಲತ್ತುಗಳನ್ನು ಹಿಂದೆಗೆದುಕೊಂಡು ನಿಷ್ಕ್ರಿಯ ಇಚ್ಛಾಮರಣಕ್ಕೆ ಅಧಿಕಾರ ನೀಡುವ ಮುಂಚಿತ ‘ಲಿವಿಂಗ್ ವಿಲ್’ನ್ನು ಮಾಡಬಹುದಾಗಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News