×
Ad

ತಟರಕ್ಷಕ ದಳದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಷ

Update: 2018-03-10 21:23 IST

ಹೊಸದಿಲ್ಲಿ, ಮಾ.10: ಭಾರತದ ತಟರಕ್ಷಕ ದಳದ ಹೆಲಿಕಾಪ್ಟರ್ ಒಂದು ಮಹಾರಾಷ್ಟ್ರದ ರಾಯ್‌ಗಡ ಜಿಲ್ಲೆಯ ನಂದಗಾಂವ್ ಎಂಬಲ್ಲಿ ತುರ್ತು ಭೂಸ್ಪರ್ಷ ಮಾಡಿದ್ದು, ಘಟನೆಯಲ್ಲಿ ಮಹಿಳಾ ಪೈಲಟ್ ಗಾಯಗೊಂಡಿದ್ದಾರೆ.

ಹೆಲಿಕಾಪ್ಟರ್‌ನಲ್ಲಿದ್ದ ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಭಾರತೀಯ ನೌಕಾದಳದ ಹೆಲಿಕಾಪ್ಟರನ್ನು ತಕ್ಷಣ ಸ್ಥಳಕ್ಕೆ ರವಾನಿಸಲಾಯಿತು. ಬಳಿಕ ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿವರ್ಗದವರನ್ನೂ ರಕ್ಷಿಸಿ ಮುಂಬೈಯ ನೌಕಾದಳದ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ. ದಕ್ಷಿಣ ಮುಂಬೈಯ ಕರಾವಳಿ ತೀರ ಪ್ರದೇಶದಲ್ಲಿ ಈ ಹೆಲಿಕಾಪ್ಟರ್ ಗಸ್ತು ಕಾರ್ಯ ನಡೆಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News