×
Ad

ನವೀನ್ ಡಿಸೋಜ ಕೊಲೆ ಆರೋಪಿಗಳಿಗೆ ನ್ಯಾಯಾಂಗ ಬಂಧನ

Update: 2018-03-10 21:28 IST

ಉಡುಪಿ, ಮಾ.10: ಸಾಂತೂರು ಗ್ರಾಮದ ಕಾಂಜರಕಟ್ಟೆ ಬಾರ್ ಬಳಿ ಫೆ.28 ರಂದು ರಾತ್ರಿ ನಡೆದ ರೌಡಿ ಶೀಟರ್ ನವೀನ್ ಡಿಸೋಜ(41) ಕೊಲೆ ಪ್ರಕರಣದ ಎಲ್ಲ ಐದು ಮಂದಿ ಆರೋಪಿಗಳಿಗೆ ಉಡುಪಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಗಳಲ್ಲಿ ಪಲಿಮಾರು ರಾಜೀವ ನಗರದ ಮಹೇಶ್ ಗಾಣಿಗ (31) ಎಂಬಾತನನ್ನು ಮಾ.8ರಂದು ಮತ್ತು ಉಳಿದ ಆರೋಪಿಗಳಾದ ಇನ್ನಾ ಮಡ್ಮಣ್‌ಗುತ್ತು ನಿವಾಸಿ ಕಿಶನ್ ಹೆಗ್ಡೆ(32), ಕುಂಜಿಬೆಟ್ಟು ಗುಂಡಿಬೈಲಿನ ರಮೇಶ್ ಪೂಜಾರಿ(43), ಪಡುಬಿದ್ರೆ ಅಬ್ಬೇಡಿ- ಮಟ್ಟು ರಸ್ತೆಯ ಮೋಹನ್ ಚಂದ್ರ ವಿ.ಶೆಟ್ಟಿ(23), ಉಪ್ಪೂರು ಕೊಳಲಗಿರಿಯ ನಾಗರಾಜ ಪೂಜಾರಿ(18) ಎಂಬವರನ್ನು ಮಾ.9ರಂದು ಸಂಜೆ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಎಲ್ಲ ಆರೋಪಿಗಳಿಗೆ ಮಾ.22ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದರು. ಎಲ್ಲ ಆರೋಪಿಗಳನ್ನು ಮಂಗಳೂರು ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News