ವರದಕ್ಷಿಣೆ ಕಿರುಕುಳ: ದೂರು
Update: 2018-03-10 21:30 IST
ಕುಂದಾಪುರ, ಮಾ.10: ವಡೇರಹೋಬಳಿಯ ಸಂಗೀತಾ ಪೂಜಾರಿ(32) ಎಂಬವರಿಗೆ ಆಕೆಯ ಪತಿಯ ಮನೆಯವರು ಹೆಚ್ಚಿನ ವರದಕ್ಷಿಣೆ ಹಣ ತರು ವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2013ರಲ್ಲಿ ಸಂಗೀತಾ ಹಟ್ಟಿಯಂಗಡಿಯ ಅಶೋಕ ಪೂಜಾರಿ ಎಂಬವರನ್ನು ಮದುವೆಯಾಗಿದ್ದು, ಆ ವೇಳೆ ಚಿನ್ನಾಭರಣ ಹಾಗೂ ನಗದು ರೂಪದಲ್ಲಿ ವರ ದಕ್ಷಿಣೆಯನ್ನು ಪಡೆದುಕೊಂಡಿದ್ದರು. ಮದುವೆಯ ಬಳಿಕ ಸಂಗೀತಾ ಅವರ ಪತಿ ಮತ್ತು ಸರೋಜಾ ಪೂಜಾರಿ ಎಂಬವರು ಸೇರಿ ಸಂಗೀತಾಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಲ್ಲದೆ ಇನ್ನೂ ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಪೀಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.