ಹಿತಮಿತ ಆಹಾರ ಸೇವಿಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಮಹಿಳೆಯರಿಗೆ ಡಾ.ಚೈತ್ರಾ ಹೆಬ್ಬಾರ್ ಕಿವಿಮಾತು
ಉಡುಪಿ, ಮಾ.10: ಸೌಂದರ್ಯ, ಕ್ರಿಯಾಶೀಲತೆ, ಕ್ರಿಯಾತ್ಮಕತೆ, ತನ್ಮಯತೆ, ಉತ್ಸಾಹಕ್ಕೆ ಪರ್ಯಾಯ ಹೆಸರಾದ ಮಹಿಳೆಯರು ಹಿತಮಿತ ಆಹಾರ ಸೇವಿಸಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಡಾ.ಚೈತ್ರಾ ಹೆಬ್ಬಾರ್ ಕಿವಿಮಾತು ಹೇಳಿದ್ದಾರೆ.
ಕೊಂಕಣ ರೈಲ್ವೆ ವತಿಯಿಂದ ಇಂದ್ರಾಳಿ ರೈಲ್ವೆ ನಿಲ್ದಾಣದ ಸಮುದಾಯ ಭವನದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಉತ್ತಮ ಪೌಷ್ಟಿಕ ಆಹಾರ ಸ್ವೀಕಾರ ಹವ್ಯಾಸ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ತ್ರಿಲಗಳಾದ ಅಣತಿಕಾಯಿ, ಶಾಂತಿಕಾಯಿ, ನೆಲ್ಲಿಕಾಯಿಯನ್ನು ಮನೆ ಮದ್ದುಗಳಾಗಿ ಮಾತ್ರವಲ್ಲದೇ ಪ್ರತಿಯೊಂದು ಆಯುರ್ವೇದ ಔಷಧಿಯಲ್ಲಿ ಬಳಸಲಾಗುತ್ತದೆ. ಇದು ದೇಹದಲ್ಲಿನ ದೋಷಗಳನ್ನು ಹೊರ ಹಾಕುವುದರ ಜೊತೆಗೆ ಕಣ್ಣಿನ ಸೌಂದರ್ಯಕ್ಕೂ ಅನುಕೂಲವಾಗಲಿದೆ ಎಂದರು.
ಸಾಂಸಾರಿಕ ಬದುಕಿನ ಸಂಕಷ್ಟಕ್ಕೆ ಸದಾ ಹೆಗಲು ಕೊಟ್ಟು, ಮನೆಯನ್ನು ನಿಭಾಯಿಸಿಕೊಂಡು ಹೋಗುವ ಮಹಿಳೆ ಪ್ರಕೃತಿಗೆ ಸಮ. ಮಹಿಳೆ ಸಂಸಾರದ ಜಂಜಾಟದ ನಡುವೆ ಇತರೆ ಒತ್ತಡಗಳಿಗೆ ಹೆಗಲು ಕೊಡುತ್ತಾಳೆ. ಈ ಸಲುವಾಗಿ ಮಹಿಳೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದರು.
ಮಾನಸಿಕ ಒತ್ತಡವನ್ನು ನಿಗ್ರಹ ಮಾಡಿ ಮನಸ್ಸನ್ನು ನಿಯಂತ್ರಣದಲ್ಲಿ ಇಡಲು ಅರಸಿನ ಪೂರಕವಾಗಿದೆ. ಇದರಿಂದ ಶ್ವಾಸಕೋಶ ಸಮಸ್ಯೆಗೂ ಕಡಿವಾಣ ಹಾಕಬಹುದಾಗಿದೆ. ಎಳ್ಳೆಣ್ಣೆಯ ಬಳಕೆಯಿಂದ ದೇಹ ಕಾಂತಿಯುಕ್ತವಾಗುವುದರ ಜತೆಗೆ ಅಭ್ಯಂಗ ಸ್ನಾನದಿಂದ ಮಹಿಳೆಯ ವಯಸ್ಸನ್ನು ಮರೆ ಮಾಚಬಹುದಾಗಿದೆ ಎಂದರು.
ರೋಗ ನಿವಾರಣೆಗೆ ಮದ್ದು ಮಾಡುವುದಕ್ಕಿಂತ ಆರೋಗ್ಯದಾಯಕ ಆಹಾರ ಮುಖ್ಯ. ಜೀರ್ಣಶಕ್ತಿ ನೋಡಿಕೊಂಡು ಆಹಾರ ಸೇವನೆ ಉತ್ತಮ. ಸಮ ಪ್ರಮಾಣ, ಸಮಯಕ್ಕೆ ಸರಿಯಾಗಿ ಕ್ರಮಬದ್ಧವಾಗಿ ಉತ್ತಮ ಆಹಾರ ಸೇವಿಸುವುದು ಅಗತ್ಯ. ಟಿವಿ, ಮೊಬೈಲ್ ಬಳಕೆ ಮಾಡುತ್ತಾ ಊಟ ಸೇವನೆ ಯಿಂದ ಆರೋಗ್ಯ ಸಮಸ್ಯೆ ುತ್ತಷ್ಟು ಹೆಚ್ಚಬಹುದು ಎಂದರು.
ರೋಗ ನಿವಾರಣೆಗೆ ಮದ್ದು ಮಾಡುವುದಕ್ಕಿಂತ ಆರೋಗ್ಯದಾಯಕ ಆಹಾರ ಮುಖ್ಯ. ಜೀರ್ಣಶಕ್ತಿ ನೋಡಿಕೊಂಡು ಆಹಾರ ಸೇವನೆ ಉತ್ತಮ. ಸಮ ಪ್ರಮಾಣ, ಸಮಯಕ್ಕೆ ಸರಿಯಾಗಿ ಕ್ರಮಬದ್ಧವಾಗಿ ಉತ್ತಮ ಆಹಾರ ಸೇವಿಸುವುದು ಅಗತ್ಯ. ಟಿವಿ, ಮೊಬೈಲ್ ಬಳಕೆ ಮಾಡುತ್ತಾ ಊಟ ಸೇವನೆ ಯಿಂದ ಆರೋಗ್ಯ ಸಮಸ್ಯೆ ಮತ್ತಷ್ಟು ಹೆಚ್ಚಬಹುದು ಎಂದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ಹಿರಿಯ ಡಯಟಿಶಿಯನ್ ಸುವರ್ಣಾ ಹೆಬ್ಬಾರ್, ಕೆಎಂಸಿ ಸೀರೋಗ ತಜ್ಞೆ ಡಾ.ಶುಭಾ ರಾವ್, ಡಾ. ಸ್ಟೀವನ್ ಜಾರ್ಜ್ ಉಪಸ್ಥಿತರಿದ್ದರು.
ಕೊಂಕಣಿ ರೈಲ್ವೆಯ ಪಿಆರ್‌ಒ ಸುಧಾ ಕೃಷ್ಣಮೂರ್ತಿ ಸ್ವಾಗತಿಸಿದರು. ರಜನಿ ವಂದಿಸಿದರು.