×
Ad

ಪುತ್ತೂರು: ಅತ್ಯಾಚಾರ ಪ್ರಕರಣ; ಜ್ಯೋತಿಷ್ಯ ಸೆರೆ

Update: 2018-03-10 21:55 IST
ಬಾಲಚಂದ್ರ ಆಚಾರ್ಯ

ಪುತ್ತೂರು, ಮಾ. 10: ಜ್ಯೋತಿಷ್ಯ ಕೇಳಲೆಂದು ಮನೆಯವರೊಂದಿಗೆ ಬಂದಿದ್ದ ಬಾಲಕಿಯನ್ನು ಜ್ಯೋತಿಷಿಯೊಬ್ಬ ಕೊಠಡಿಗೆ ಕರೆಸಿ ಆಕೆಯನ್ನು ಅತ್ಯಾಚಾರ ನಡೆಸಿದ ಘಟನೆ ಪುತ್ತೂರು ತಾಲೂಕಿನ ಬನ್ನೂರು ನೆಕ್ಕಿಲ ಎಂಬಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿರುವ ನಗರ ಪೊಲೀಸರು ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜ್ಯೋತಿಷಿ ಬನ್ನೂರು ನೆಕ್ಕಿಲ ನಿವಾಸಿ ಬಾಲಚಂದ್ರ ಆಚಾರ್ಯ(34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಅವಿವಾಹಿತನಾಗಿರುವ ಈತ ಮನೆಯಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಎನ್ನಲಾಗಿದ್ದು, ಪುತ್ತೂರು ಕಸಬಾ ವ್ಯಾಪ್ತಿಯ ದಂಪತಿ ತಮ್ಮ ಪುತ್ರಿಯೊಂದಿಗೆ ಮಾ.3 ರಂದು ಈತನ ಬಳಿಗೆ ಜ್ಯೋತಿಷ್ಯ ಕೇಳಲೆಂದು ಹೋಗಿದ್ದರು. ಅಲ್ಲಿ ದೋಷ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದು ಹಿಂದಿರುಗುವ ವೇಳೆ ದಂಪತಿಯನ್ನು ಹೊರಗಡೆ ಕುಳಿತುಕೊಳ್ಳುವಂತೆ ಸೂಚಿಸಿದ ಆತ ಬಾಲಕಿಯನ್ನು ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಪೊಲೀಸರಿಗೆ ಬಾಲಕಿಯ ತಂದೆ ಮತ್ತು ತಾಯಿ ಮಾ.9ರಂದು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News