×
Ad

ಸರಕಾರಿ ಹುದ್ದೆ ಬಯಸುವವರು ಧರ್ಮ ಘೋಷಿಸುವುದು ಕಡ್ಡಾಯ

Update: 2018-03-10 22:16 IST

ಇಸ್ಲಾಮಾಬಾದ್, ಮಾ. 10: ಸರಕಾರಿ ಉದ್ಯೋಗಗಳನ್ನು ಹೊಂದಲು ಬಯಸುವ ಯಾರೇ ಆದರೂ ತಮ್ಮ ಧಾರ್ಮಿಕ ನಂಬಿಕೆಯನ್ನು ಘೋಷಿಸಬೇಕು ಎಂದು ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಚುನಾವಣಾ ಕಾಯ್ದೆ 2017ರಲ್ಲಿ ಒಳಗೊಂಡಿರುವ ‘ಖಾತ್ಮಿ ನಬುವ್ವತ್’ ಪ್ರತಿಜ್ಞೆಗೆ ವಿವಾದಾಸ್ಪದ ಬದಲಾವಣೆಗಳನ್ನು ತರುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ಶೌಕತ್ ಅಝೀಝ್ ಸಿದ್ದೀಕಿ ಈ ತೀರ್ಪು ಪ್ರಕಟಿಸಿದರು.

ನಾಗರಿಕ ಸೇವೆ, ಸಶಸ್ತ್ರ ಪಡೆಗಳು ಅಥವಾ ನ್ಯಾಯಾಂಗದ ಸೇವೆಗೆ ಸೇರಬಯಸುವ ಪಾಕಿಸ್ತಾನೀಯರು ತಮ್ಮ ಧರ್ಮದ ಬಗ್ಗೆ ಪ್ರತಿಜ್ಞೆ ಸ್ವೀಕರಿಸುವುದು ಕಡ್ಡಾಯವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಕಾನೂನಿಗೆ ತಿದ್ದುಪಡಿಗಳನ್ನು ತರುವುದನ್ನು ವಿರೋಧಿಸಿ ಕಳೆದ ವರ್ಷ ಸಂಘಟನೆಯೊಂದರ ಸದಸ್ಯರು ಇಸ್ಲಾಮಾಬಾದ್‌ನಲ್ಲಿ ಹಲವು ದಿನಗಳ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News