×
Ad

ನ್ಯಾಯಾಧೀಶರು ಬದ್ಧತೆಯೊಂದಿಗೆ ಕಾರ್ಯನಿರ್ವಹಣೆ ಮುಖ್ಯ-ನ್ಯಾ.ಆ್ಯಂಟೋನಿ ಡೊಮಿನಿಕ್‌

Update: 2018-03-10 22:17 IST

ಮಂಗಳೂರು, ಫೆ.10: ಜ್ಞಾನ, ಪ್ರಯತ್ನ , ಪರಿಶ್ರಮ, ಬದ್ಧತೆಯೊಂದಿಗೆ ನ್ಯಾಯಾಧೀಶ ರ ಹೊಣೆಗಾರಿಕೆಗೆಯನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ತಪ್ಪುಗಳಾಗದಂತೆ ಎಚ್ಚರವಹಿಸಬೇಕಾಗಿದೆ ಎಂದು ಕೇರಳ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆ್ಯಂಟೊನಿ ಡೊಮಿನಿಕ್ ತಿಳಿಸಿದ್ದಾರೆ.

ಅವರು ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕಥೊಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಅತೀ.ವಂ.ಡಾ.ಅಲೊಶಿಯಸ್ ಪಾವ್ಲ್ ಡಿ ಸೋಜ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ಕೇರಳ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಕ್ಯಾಥೊಲಿಕ್ ಸಮುದಾಯದಿಂದ ಬಂದ ಪ್ರಥಮ ಮುಖ್ಯ ನ್ಯಾಯಾಧೀಶ ಎಂಬ ಹೊಣೆಗಾರಿಕೆಯನ್ನು ವಹಿಸಿಕೊಂಡ ಹೆಮ್ಮೆ ಇದೆ. ನಾನು ನ್ಯಾಯಾವಾದಿಯಾಗಿ ಬಳಿಕ ಈ ವೃತ್ತಿಗೆ ಬಂದೆ. ನಾನು ಕಾನೂನು ವ್ಯಾಸಂಗ ಮಾಡಲು ಬಂದಿರುವುದು ಆಕಸ್ಮಿಕ ಅದೇ ರೀತಿ ವಕೀಲ ವೃತ್ತಿಯನ್ನು ಆಕಸ್ಮಿಕವಾಗಿ ಆಯ್ದುಕೊಂಡೆ. ನಾನು ನ್ಯಾಯಾಧೀಶನಾಗಿ ಆಯ್ಕೆಯಾಗುವ ಬಗ್ಗೆಯೂ ನಿರೀಕ್ಷಿಸಿರಲಿಲ್ಲ ಎಂದು ನ್ಯಾ.ಆ್ಯಂಟೋನಿ ಡೊಮಿನಿಕ್ ತಿಳಿಸಿದರು.

ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಮೂಲಕ ನಾನು ಕಾನೂನು ಪದವಿ ಪಡೆದು ಉನ್ನತ ಹುದ್ದೆ ಯಲ್ಲಿದ್ದು ಮತ್ತೆ ಮಂಗಳೂರಿಗೆ ಬರುತ್ತಿರುವುದು ಸಂತಸವಾಗಿದೆ. ದೇವರ ಮೇಲಿನ ನಂಬಿಕೆ ಹೊಂದಿರುವ ವ್ಯಕ್ತಿಯಾಗಿರುವ ನಾನು ನಾನು ನಿರ್ವಹಿಸುವ ಹೊಣೆಗಾರಿಕೆಯನ್ನು ಜೀಸಸ್‌ನ ಮೇಲಿನ ನಂಬಿಕೆಯೊಂದಿಗೆ ಕಾನೂನು , ಕರ್ತವ್ಯಗಳಿಗೆ ಚ್ಯುತಿಯಾಗದಂತೆ ನಡೆಸುತ್ತಿದ್ದೇನೆ ಎನ್ನುವ ತೃಪ್ತಿ ಇದೆ. ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಕಾರ್ಯಚಟುವಟಿಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಮಂಗಳೂರು ಕಥೊಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಅತೀ.ವಂ.ಡಾ.ಅಲೊಶಿಯಸ್ ಪಾವ್ಲ್ ಡಿ ಸೋಜ ಮಾತನಾಡುತ್ತಾ, ಮಂಗಳೂರನ್ನು ಪೂರ್ವದ ರೋಮ್ ಎಂದು ಕರೆಯಲಾಗುತ್ತದೆ. ಈ ಕ್ರೈಸ್ತ ಧರ್ಮ ಪ್ರಾಂತ್ಯದಿಂದ ಸಾಕಷ್ಟು ಮಂದಿ ಬಿಷಪ್ ಹಾಗೂ ಆರ್ಚ್ ಬಿಷಪ್ ಆಯ್ಕೆಯಾಗಿ ಸೇವೆ ಸಲ್ಲಿಸಿದ ಹಿರಿಮೆ ಇದೆ.ದೇಶದಲ್ಲಿ ಐಎಎಸ್,ಐಪಿಎಸ್ ಹಾಗೂ ಇತರ ಉನ್ನತ ಹುದ್ದೆಗಳ ಮೂಲಕ ಸಾಕಷ್ಟು ಮಂದಿ ಸಮುದಾಯ ವ್ಯಕ್ತಿಗಳು ಜವ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ ಎನ್ನಲು ಸಂತೋಷವಾಗುತ್ತದೆ. ಈ ಹಾದಿಯಲ್ಲಿ ಭೇಟಿ ನೀಡಿರುವ ಕೇರಳದ ಮುಖ್ಯ ನ್ಯಾಯಾಧೀಶರ ಆಗಮನ ಸಂತಸವನ್ನುಂಟು ಮಾಡಿದೆ. ಅವರಿಗೆ ಇನ್ನಷ್ಟು ಸೇವೆ ಮಾಡುವ ಅವಕಾಶ ಜೇಸಸ್ ದಯಪಾಲಿಸಲಿ ಎಂದು ಬಿಷಪ್ ಶುಭ ಹಾರೈಸಿ ಶಾಲು, ಪೇಟ ತೊಡಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮಪ್ರಾಂತ್ಯದ ಅಧಿಕಾರಿಗಳಾದ ವಂ.ಡೆನ್ನಿಸ್ ಮೊರಾಸ್ ಪ್ರಭು, ಎಂ.ಪಿ.ನರ್ಹೋನ್ನಾ, ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಮಶುಪಾಲ ಪಿ.ಡಿ.ಸೆಬಾಸ್ಟಿನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News