ಮಾರ್ಚ್ 15ರಂದು ದಿನಕರನ್ ಪಕ್ಷದ ಹೆಸರು ಘೋಷಣೆ

Update: 2018-03-11 15:25 GMT

ಚೆನ್ನೈ, ಮಾ. 11: ಪಕ್ಷದ ಚಿಹ್ನೆ ಮಂಜೂರು ಕುರಿತು ಸರಣಿ ಹೋರಾಟದ ಬಳಿಕ, ಮೂಲೆಗುಂಪಾದ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ರವಿವಾರ, ಈ ವಾರಾಂತ್ಯದಲ್ಲಿ ಮಧುರೈಯಲ್ಲಿ ತನ್ನ ರಾಜಕೀಯ ಪಕ್ಷದ ಹೆಸರು ಘೋಷಿಸಲಾಗುವುದು ಹಾಗೂ ಧ್ವಜ ಅನಾವರಣಗೊಳಿಸಲಾಗುವುದು ಎಂದಿದ್ದಾರೆ. ‘‘ನಮ್ಮ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಕ್ಷದ ಹೆಸರು ಘೋಷಿಸಲು ಹಾಗೂ ಪಕ್ಷದ ಧ್ವಜವನ್ನು ಅನಾವರಣಗೊಳಿಸಲು ಮಧುರೈ ಜಿಲ್ಲೆಯ ಮೇಲೂರಿನಲ್ಲಿ ಮಾರ್ಚ್ 15ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಸಲಾಗುವುದು’’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಮಾನ್ಯ ಚಿಹ್ನೆ, ಮುಖ್ಯವಾಗಿ ಪ್ರೆಶರ್ ಕುಕ್ಕರ್ ಹಾಗೂ ದಿನಕರನ್ ನೇತೃತ್ವದ ಎಐಎಡಿಎಂಕೆ ಬಣಕ್ಕೆ ಅವರ ಆಯ್ಕೆಯ ಹೆಸರು ನೀಡಬೇಕೆಂಬ ದಿನಕರನ್ ಮನವಿಗೆ ದಿಲ್ಲಿ ಉಚ್ಚ ನ್ಯಾಯಾಲಯ ಮಾರ್ಚ್ 9ರಂದು ಅನುಮತಿ ನೀಡಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ನೇತೃತ್ವದ ಗುಂಪಿಗೆ ಎರಡು ಎಲೆಗಳ ಚಿಹ್ನೆ ನೀಡಿ ಕಳೆದ ವರ್ಷ 23ರಂದು ಚುನಾವಣಾ ಆಯೋಗ ನೀಡಿದ ಆದೇಶ ಪ್ರಶ್ನಿಸಿ ದಿನಕರನ್-ವಿ.ಕೆ. ಶಶಿಕಲಾ ಸಲ್ಲಿಸಿದ ಮಧ್ಯಂತರ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News