ತಮಿಳುನಾಡು: ಕಾಡ್ಗಿಚ್ಚಿಗೆ ಸಿಲುಕಿದ 20 ವಿದ್ಯಾರ್ಥಿಗಳು
ಚೆನ್ನೈ,ಮಾ.11: ತಮಿಳುನಾಡಿನ ಥೇಣಿ ಜಿಲ್ಲೆಯ ಕುರುಂಜಿನಿ ಬೆಟ್ಟದಲ್ಲಿ ರವಿವಾರ ಭುಗಿಲೆದ್ದ ಭೀಕರ ಕಾಡ್ಗಿಚ್ಚಿನ ನಡುವೆ ಕನಿಷ್ಠ 20 ಮಂದಿ ವಿದ್ಯಾರ್ಥಿಗಳು ಸಿಕ್ಕಿಹಾಕಿ ಕೊಂಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿಯವರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಪಾಯದಲ್ಲಿರುವ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆಗೆ ನೆರವಾಗುವಂತೆ ಭಾರತೀಯ ವಾಯುಪಡೆಗೆ ಸೂಚನೆ ನೀಡಿದ್ದಾರೆ.
ವಾಯುಪಡೆಯ ದಕ್ಷಿಣ ಕಮಾಂಡ್‌ನ ಅಧಿಕಾರಿಗಳು ಈಗಾಗಲೇ ಥೇಣಿಯ ಜಿಲ್ಲಾಧಿಕಾರಿ ಜೊತೆ ಸಂಪರ್ಕದಲ್ಲಿದ್ದಾರೆಂದು ರಕ್ಷಣಾ ಸಚಿವೆ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ, ಈಗಾಲೇ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕದಳ ಕೂಡಾ ಸ್ಥಳವನ್ನು ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.
ಥೇನಿ ಜಿಲ್ಲೆಯ ಕುರಂಗನಿ ಬೆಟ್ಟ ಪ್ರದೇಶದಲ್ಲಿ ಹಲವಾರು ವಿದ್ಯಾರ್ಥಿಗಳು ಚಾರಣ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಡ್ಗಿಚ್ಚಿನ ನಡುವೆ ಸಿಕ್ಕಿಹಾಕಿಕೊಂಡಿದ್ದರು.