×
Ad

​ಪಲ್ಸ್ ಪೋಲಿಯೊ: ದ.ಕ.ದಲ್ಲಿ ಶೇ.88.55 ಸಾಧನೆ

Update: 2018-03-11 21:39 IST

ಮಂಗಳೂರು, ಮಾ. 11: ಪೋಲಿಯೊ ರೋಗ ನಿರ್ಮೂಲನಾ ಕಾರ್ಯಕ್ರಮದಡಿ 2018ರ ಪಲ್ಸ್ ಪೋಲಿಯೊ ಅಭಿಯಾನದ ಎರಡನೆ ಸುತ್ತು ರವಿವಾರ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.88.55ರಷ್ಟು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆಯು ಜಿಲ್ಲೆಯ 5 ವರ್ಷದೊಳಗಿನ 1,59,017 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಸಿದ್ಧತೆ ನಡೆಸಿತ್ತು. ಈ ಪೈಕಿ 1,40,810 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

ಮಂಗಳೂರು ತಾಲೂಕಿನಲ್ಲಿ ಶೇ.79.67, ಪುತ್ತೂರು ಶೇ.99.51, ಬೆಳ್ತಂಗಡಿ ಶೇ.95.39, ಬಂಟ್ವಾಳ ಶೇ.94.83 ಮತ್ತು ಸುಳ್ಯ ತಾಲೂಕಿನಲ್ಲಿ ಶೇ.95.44 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ.

ಈ ಅಭಿಯಾನಕ್ಕಾಗಿ ಜಿಲ್ಲೆಯಲ್ಲಿ 925 ಬೂತ್, 1,671 ತಂಡ, 3,806 ಲಸಿಕಾ ಕಾರ್ಯಕರ್ತರು, 191 ಮಂದಿ ಮೇಲ್ವಿಚಾರಕರು, 9 ಸಂಚಾರಿ ತಂಡ, 26 ಟ್ರಾನ್ಸಿಟ್ ತಂಡ ಕಾರ್ಯನಿರ್ವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News