'ಸಾನಿಧ್ಯ ಉತ್ಸವ -ವಿಶನ್ -2018' ಸಮಾರೋಪ
ಮಂಗಳೂರು, ಮಾ.11 : ಸಾನಿಧ್ಯ ಭಿನ್ನ ಸಾಮಥ್ಯದ ವಸತಿ ಶಾಲೆಯ ಮಕ್ಕಳ ಕಲೆ ಮತ್ತು ವಿಶೇಷ ಕಾರ್ಯಕ್ರಮಗಳನ್ನೊಳಗೊಂಡ ಎರಡು ದಿನಗಳ ವಿಶನ್ -2018ನಗರದ ಕದ್ರಿ ಉದ್ಯಾನವನದಲ್ಲಿಂದು ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಿನ್ನ ಸಾಮಥ್ಯದ ಮಕ್ಕಳ ಶಿಕ್ಷಣ ಕೇಂದ್ರಕ್ಕೆ ಸಮಾಜದ ಎಲ್ಲಾ ವರ್ಗದ ಜನರ ಪೋತ್ರಾಹ ಅಗತ್ಯ ಎಂದು ನಿಟ್ಟೆ ಡೀಮ್ಡ್ ವಿಶ್ವ ವಿದ್ಯಾನಿಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ಸ್ಥರಾದ ಡಾ.ಇಂದ್ರಾಣಿ ಕರುಣಾಸಾಗರ್ ಶುಭ ಹಾರೈಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮನಪಾ ಉಪ ಮೇಯರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಆಡಳಿತಾಧಿಕಾರಿ ವಸಂತ್ ಶೆಟ್ಟಿ ಸ್ವಾಗತಿಸಿದರು. ಮಹಾಬಲ ಮಾರ್ಲ ವಂದಿಸಿದರು.ಎಂಐಎಸ್‌ನ ಮಹಾಪ್ರಬಂಧಕ ಎಡ್ವಿನ್ ಕ್ಯಾಸ್ಟಿಲಿನೋ, ಡಾ.ಗೌತಮ್ ಶೆಟ್ಟಿ, ಕೆನರಾ ವಾಣಿಜ್ಯ ಕೈಗಾರಿಕಾ ಸಂಘದ ಉಪಾಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಸ್ಪಂದನ ಸಂಸ್ಥೆಯ ಜನಾರ್ದನ, ಗೃಹ ರಕ್ಷಕದಳದ ಚಂಪಾ, ನರೇಂದ್ರ ಶೆಣೈ ಮೊದಲಾದವರನ್ನು ಗೌರವಿಸಲಾಯಿತು.