ಬಂಟ್ವಾಳ: ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ
ಬಂಟ್ವಾಳ, ಮಾ. 11: ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ 5ನೆ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಶನಿವಾರ ಮತ್ತು ರವಿವಾರ ನಡೆಯಿತು.
ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಕಂಬಳವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಯಮಿ ವಿಜಯ ರೈ ಆಲದಪದವು ಮತ್ತು ಪ್ರಗತಿಪರ ಕೃಷಿಕ ಸುರೇಶ್ ಶೆಟ್ಟಿ ಮಿಯಾರುಗುತ್ತು ಅವರು ಉದ್ಘಾಟಿಸಿದರು.
ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಸಂಸದ ನಳಿನ್ ಕುಮಾರ್ ಕಟೀಲು ಸತ್ಯ- ಧರ್ಮ ಕಂಬಳ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಹಾಗೂ ಕಂಬಳಕ್ಕೆ ಪ್ರಾಧಾನ್ಯತೆ ನೀಡುವ ಮೂಲಕ ತುಳುನಾಡಿನ ಜನತೆ ನಮ್ಮ ಮೂಲ ಸಂಸ್ಕೃತಿಯ ಜೊತೆ ರೈತರ ಜಾನಪದ ಕ್ರೀಡೆಯನ್ನು ಉಳಿಸಿ, ಬೆಳೆಸಬೇಕು. ಕಟ್ಟುಪಾಡಿನ ಸಂದರ್ಭದಲ್ಲಿ ನಿಯಮಪಾಲನೆ, ಶಿಸ್ತಿಗೆ ಪ್ರಾಧಾನ್ಯತೆ ನೀಡಿ ಕಂಬಳವನ್ನು ವ್ಯವಸ್ಥಿತವಾಗಿ ಸಂಘಟಿಸಿದ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅಭಿನಂದನೀಯರು. ಮುಂದಕ್ಕೂಇಲ್ಲಿ ಕಂಬಳ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ,ಎಂ. ತುಂಗಪ್ಪ ಬಂಗೇರ, ಜಿ.ಆನಂದ, ದೇವದಾಸ ಶೆಟ್ಟಿ, ವಜ್ರನಾಥ ಕಲ್ಲಡ್ಕ, ಶಶಾಂಕ್ ಆಚಾರ್ಯ , ಪಿಡಬ್ಲ್ಯುಡಿ ಗುತ್ತಿಗೆದಾರ ಸಾಮ್ರಾಟ್ ಶಿವಗಿರಿ ಕಲ್ಲೇರಿ, ಕಂಬಳ ಸಮಿತಿಅಧ್ಯಕ್ಷ ಕೆ.ಹರೀಶ್ಚಂದ್ರ ಪೂಜಾರಿ ಮುಂಬೈ ಉದ್ಯಮಿಗಳಾದ ನಾರಾಯಣ ಶೆಟ್ಟಿ ಕಕ್ಯ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಉದ್ಯಮಿಗಳಾದ ವಿನು ವಿಶ್ವನಾಥ ಶೆಟ್ಟಿ ಕರಿಂಜೆ, ಸಾಯಿ ಗಿರಿಧರ ಶೆಟ್ಟಿ, ಸತೀಶ ಶೆಟ್ಟಿ ಬೋಳದಗುತ್ತು, ಕೇಶವ ಬಂಗೇರ, ಪ್ರಕಾಶ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ಸ್ಥಳದಾನಿ ತುಕ್ರಪ್ಪ ಗೌಡ ಬರ್ಕೆಜಾಲು, ಜಯ ಶೆಟ್ಟಿ ಕಿಂಜಾಲು, ಪ್ರಮುಖರಾದ ಚಿದಾನಂದ ರೈ ಕಕ್ಯ, ಚೇತನ್ ಊರ್ದೊಟ್ಟು, ಅಧ್ಯಕ್ಷ ಕೇಶವ ಫಿಟ್ಟರ್, ಸಮಿತಿ ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಪದಾಕಾರಿಗಳಾದ ಪುರುಷೋತ್ತಮ ಪೂಜಾರಿ, ರಂಜಿತ್ ಮೈರ, ಸುರೇಶ್ ಮೈರ, ಉಮೆಶ್ ನೇರಳಪಲ್ಕೆ, ಕುಸುಮಾಧರ ಉರ್ಕಿ ಮತ್ತು ವಿವಿಧ ಸಮಿತಿ ಸದಸ್ಯರು, ಪ್ರಧಾನ ತೀರ್ಪುಗಾರರಾದ ಎಂ.ರಾಜೀವ ಶೆಟ್ಟಿ ಎಡ್ತೂರು, ನಿರಂಜನ್ ರೈ ಕೋಡ್ಯಾಡಿ, ಉದ್ಘೋಷಕರಾದ ಸತೀಶ್ ಹೊಸ್ಮಾರು, ಮಹಾವೀರ ಜೈನ್, ಪ್ರಕಾಶ್ ಕರ್ಲ, ರಾಜಶೇಖರ್, ಕಂಬಳ ಕರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದೇಶ್ ಕುಮಾರ್ , ಸಂಕಪ್ಪ ಶೆಟ್ಟಿ, ಶಶಿಧರ್ ಆಚಾರ್ಯ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಉದ್ಯಮಿ ಸತೀಶ್ ಪುತ್ರನ್ ಅವರಿಗೆ ಸತ್ಯಧರ್ಮ ಕಂಬಳಶ್ರೀ ಪ್ರಶಸ್ತಿ, ಜೇಸೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರವಿ ಕಕ್ಯಪದವುಮತ್ತು ದಂತವೈದ್ಯ, ರೋಟೇರಿಯನ್ ಡಾ ರಾಜಾರಾಂ ಕೋಂಗುಜೆ ಅವರಿಗೆ ನಮ್ಮೂರ ಮುತ್ತು ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ರಾಮ ಪಿ. ಸಾಲ್ಯಾನ್, ಅಣ್ಣು ಪೂಜಾರಿ ಅಮ್ಟಾಡಿ, ವಿಟ್ಠಲ ಭಂಡಾರಿ ಪುಣ್ಕೆದಡಿ, ರವಿ ಸಾಲ್ಯಾನ್ ಕೆರೆಕೋಡಿಗುತ್ತು ಅವರನ್ನು ಅಭಿನಂದಿಸಲಾಯಿತು. ಶಿವಾನಂದ ಸ್ವಾಗತಿಸಿ, ಪ್ರಸ್ತಾವಿಸಿದರು. ರಂಜಿತ್ ಮೈರ ವಂದಿಸಿದರು. ಪ್ರಶಾಂತ್ ಮೈರ ಕಾರ್ಯಕ್ರಮ ನಿರೂಪಿಸಿದರು.