ಕೀಪ್ ಅಮೆರಿಕ ಗ್ರೇಟ್!
Update: 2018-03-11 22:47 IST
ವಾಶಿಂಗ್ಟನ್, ಮಾ. 11: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ತನ್ನ ಎರಡನೆ ಅವಧಿಯ ಚುನಾವಣಾ ಪ್ರಚಾರದ ಘೋಷವಾಕ್ಯವನ್ನು ಘೋಷಿಸಿದ್ದಾರೆ- ‘ಕೀಪ್ ಅಮೆರಿಕ ಗ್ರೇಟ್’! (ಅಮೆರಿಕದ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಿ)
ಪೆನ್ಸಿಲ್ವೇನಿಯದಲ್ಲಿ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ತನ್ನ ಹಿಂದಿನ ಘೋಷಣೆ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ನ್ನು ಇನ್ನೊಮ್ಮೆ ಬಳಸಲು ಸಾಧ್ಯವಿಲ್ಲ, ಯಾಕೆಂದರೆ, ತಾನು ಅದನ್ನು ಈಗಾಗಲೇ ಸಾಧಿಸಿದ್ದೇನೆ ಎಂದರು.
‘‘ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ (ಅಮೆರಿಕವನ್ನು ಇನ್ನೊಮ್ಮೆ ಶ್ರೇಷ್ಠಗೊಳಿಸಿ) ಎಂದು ನಾವು ಇನ್ನೊಮ್ಮೆ ಹೇಳುವಂತಿಲ್ಲ. ಯಾಕೆಂದರೆ, ನಾನದನ್ನು ಈಗಾಗಲೇ ಮಾಡಿದ್ದೇನೆ’’ ಎಂದು ಟ್ರಂಪ್ ಹೇಳಿಕೊಂಡರು.