×
Ad

ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಪಣತೊಡಬೇಕು: ಡಾ.ಶಿವಶರಣ್ ಶೆಟ್ಟಿ

Update: 2018-03-12 16:51 IST

ಕೊಣಾಜೆ, ಮಾ. 12: ಇಂದಿನ ಆಧುನಿಕ ತಂತ್ರಜ್ಞಾನ ಯುಗವು ಎಷ್ಟು ವೇಗದಲ್ಲಿ ಬೆಳೆಯುತ್ತಿದೆಯೋ ಹಾಗೆಯೇ ವಿದ್ಯಾರ್ಥಿಗಳು ಕೂಡಾ ಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕಿದೆ. ಅದರಲ್ಲೂ ಅಭಿವೃದ್ದಿಪರ ಹಾಗೂ ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರ ಮಹತ್ವಪೂರ್ಣವಾದುದು ಎಂದು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಡಾ.ಶಿವಶರಣ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫಚ್ ಫಿಸಿಯೋಥೆರಪಿ ವಿಭಾಗದ 21 ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಯಲ್ಲಿರುವ ಶಿಕ್ಷಣ ವೃಂದ ನಮ್ಮ ಜೀವನಕ್ಕೆ ಅಡಿಪಾಯವನ್ನು ಹಾಕಿಕೊಡುತ್ತದೆ. ಆದ್ದರಿಂದ ನಮ್ಮ ಜೀವನದಲ್ಲಿ ಯಾವ ಹಂತಕ್ಕೂ ತಲುಪಿದರೂ ಶಿಕ್ಷಕವೃಂದವನ್ನು ಎಂದಿಗೂ ಮರೆಯಬಾರದು ಎಂದರು.

ನಿಟ್ಟೆ ಡೀಮ್ಡ್ ವಿವಿಯ ಕುಲಸಚಿವರಾದ ಪ್ರೊ.ಅಲ್ಕಾ ಕುಲಕರ್ಣಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಉತ್ತಮವಾದ ಸಂವಹನ ಪ್ರಕಿಯೆ ಹಾಗೂ ತಾಳ್ಮೆ ಇದ್ದರೆ ಯಾವ ಸವಾಲುಗಳನ್ನು ಕೂಡಾ ಎದುರಿಸಬಹುದಾಗಿದೆ. ಅದರಲ್ಲೂ ವೈದ್ಯಕೀಯ ವೃತ್ತಿಯಲ್ಲಿರುವವರು ಈ ಎರಡು ಮನೋಭಾವನೆಯನ್ನು ಖಂಡಿತವಾಗಿಯೂ ಬೆಳೆಸಿಕೊಂಡು ಉತ್ತಮ ಸಮಾಜವನ್ನು ಕಟ್ಟಲು ಪಣತೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಧನೇಶ್ ಕುಮಾರ್ ಕೆ.ಯು. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಪುರುಷೋತ್ತಮ ಚಿಪ್ಪಾಲ್ ಅವರು ವಂದಿಸಿದರು. ವಿದ್ಯಾರ್ಥಿ ನಾಯಕಿ ರಮ್ಯಾ ವೇದಿಕೆಯಲ್ಲಿ ಉಪಸ್ತೀತರಿದ್ದರು. ಉಪನ್ಯಾಸಕಿ ಸುಧಿನಿ ಅರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News