ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಶಾಸಕಿ ಶಕುಂತಳಾ ಶೆಟ್ಟ
ಪುತ್ತೂರು, ಮಾ. 12: ಪುತ್ತೂರಿನ ಬ್ರಹ್ಮಶ್ರೀ ಬಿಲ್ಲವ ಸಭಾಭವನದಲ್ಲಿ ತಾಲೂಕು ಅಕ್ರಮ ಸಕ್ರಮ ಸಮಿತಿ ಚರ್ಚೆ ಶಾಸಕಿ ಶಕುಂತಳಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಸಭೆಯಲ್ಲಿ ಅರ್ಜಿದಾರರು ತಮ್ಮ ಅರ್ಜಿಗಳ ಕುರಿತು ಇನ್ನೂ ವಿಲೇವಾರಿ ಆಗಿಲ್ಲ. ಅಧಿಕಾರಿಗಳು ವಿ.ಎ.ಗಳು ಒಂದಲ್ಲಾ ಒಂದು ಕಾರಣ ಹೇಳಿ ಅರ್ಜಿ ತಿರಸ್ಕರಿಸುತ್ತಾರೆಂದು ಆರೋಪ ಮಾಡಿದರು. ಈ ಕುರಿತು ಶಾಸಕಿ ಶಕುಂತಳಾ ಶೆಟ್ಟಿಯವರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ತಕ್ಷಣವೇ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ 45 ಅರ್ಜಿಗಳ ಪರಿಶೀಲನೆ ನಡೆಸಲಾಯಿತು. ಅವುಗಳ ಪೈಕಿ ಕೆಲವು ಅರ್ಜಿಗಳು ಇತ್ಯರ್ಥಗೊಂಡಿತ್ತು. ಉಳಿದ ಅರ್ಜಿಗಳನ್ನು ಮುಂದೆ ಪರಿಶೀಲಿಸಲಾಗುವುದು ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.
ತಹಶೀಲ್ದಾರ್ ಅನಂತ ಶಂಕರ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಶುಭಮಾಲಿನಿ ಮಲ್ಲಿ, ವಾಸು ನಾಯ್ಕ, ದಿನೇಶ್ ಪಿ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾ.ಪಂ ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಜತ್ತಪ್ಪ ಗೌಡ, ಇಸಾಕ್ ಸಾಲ್ಮರ ಸೇರಿದಂತೆ ಅನೇಕರು ಹಾಗೂ ಫಲಾನುಭವಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.