ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ: ದೂರು
Update: 2018-03-12 21:37 IST
ಕುಂದಾಪುರ, ಮಾ.12: ಕುಂದಾಪುರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್, ಕೋಡಿ ವಾರ್ಡ್ 14 ಮತ್ತು 15ರ ಬೀಟ್ ಸಿಬ್ಬಂದಿ ರವಿ ಗಣಪತಿ ಶಿಂಧೆ ಎಂಬವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.11ರಂದು ರಾತ್ರಿ ಕೋಡಿ ಸರಕಾರಿ ಆಸ್ಪತ್ರೆಯ ಎದುರುಗಡೆ ಗೂಡಂಗಡಿಯ ಬಳಿ ಮಟ್ಕಾ ಜುಗಾರಿ ನಡೆಸುವ ಕುರಿತ ಮಾಹಿತಿಯಂತೆ ರವಿ ಗಣಪತಿ ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ಗಮನಿಸುತ್ತಿರುವಾಗ ಅಶೋಕ ಮೊಗವೀರ, ಜಿತೇಂದ್ರ ಪೂಜಾರಿ, ಕುಮಾರ ಎಂಬವರು ಬಂದು ಗದರಿಸಿ, ಮೈಗೆ ಕೈಹಾಕಿ, ದೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.