×
Ad

ಉಡುಪಿ: ವ್ಯಾಪಾರೋದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ

Update: 2018-03-12 21:51 IST

ಉಡುಪಿ, ಮಾ.12: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉದ್ದಿಮೆದಾರರು 2018-19ನೇ ಸಾಲಿನ ಉದ್ದಿಮೆ ಪರವಾನಿಗೆಯನ್ನು ಮಾರ್ಚ್ ತಿಂಗಳಿನೊಳಗೆ ನಿಗದಿತ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಬಹುದು ಎಂದು ಪಟ್ಟಣ ಪಂಚಾಯತ್‌ನ ಪ್ರಕಟಣೆ ತಿಳಿಸಿದೆ.

ಪರವಾನಿಗೆ ಪಡೆಯದೇ ಇದ್ದ ಉದ್ದಿಮೆದಾರರು ಕಟ್ಟಡ ತೆರಿಗೆ ಪ್ರತಿ, ಮಾಲಕರ ಬಾಡಿಗೆ ಕರಾರು ಪತ್ರ, ಅರ್ಜಿದಾರರ ಪೋಟೋ, ಆಧಾರ್ ಕಾರ್ಡ್ ಪ್ರತಿ, ಉದ್ಯಮ ಸ್ಥಳದ ಕಣ್ಣು ನಕ್ಷೆ, ಅಫಿದಾವಿತ್‌ನೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.

ಪರವಾನಿಗೆ ಪಡೆದು ಉದ್ದಿಮೆ ನಡೆಸದೇ ಇದ್ದಲ್ಲಿ ನಿಗದಿತ ಅರ್ಜಿ ಸಲ್ಲಿಸಿ ಪರವಾನಿಗೆ ನವೀಕರಣ ಶುಲ್ಕ ಪಾವತಿಸುವಂತೆ ಹಾಗೂ ಪರವಾನಿಗೆ ನವೀಕರಣ ತಡವಾಗಿದ್ದಲ್ಲಿ ದಂಡಸಹಿತ ಶುಲ್ಕ ಪಾವತಿಸಿ ಪರವಾನಿಗೆಯನ್ನು ರದ್ದುಪಡಿಸಲಾಗುವುದು. ಅಲ್ಲದೇ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ಎಲ್ಲಾ ಗೂಡಂಗಡಿ ವ್ಯಾಪಾರಸ್ಥರು ಕೂಡಲೇ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News