ಬಜ್ಪೆ: ನೂತನ ಮಸೀದಿ ‘ಮಸ್ಜಿದುರ್ರಹ್ಮಾನ್’ ಉದ್ಘಾಟನೆ
ಮಂಗಳೂರು, ಮಾ. 12: ಬಜ್ಪೆ ಸೌಹಾರ್ದನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಸೀದಿ ‘ಮಸ್ಜಿದುರ್ರಹ್ಮಾನ್’ ಮಸೀದಿಯನ್ನು ಸೋಮವಾರ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವನ ಆಜ್ಞಾನುಸಾರ ಹಾಗೂ ಪ್ರವಾದಿ ಜೀವನ ಕ್ರಮವನ್ನು ಅನುಸರಿಸಿ ಜೀವಿಸುವಂತೆ ಕರೆ ನೀಡಿದರು. ಅಲ್ಲದೆ, ಇತರ ಧರ್ಮೀಯರೊಂದಿಗೆ ಉತ್ತಮವಾಗಿ ವರ್ತಿಸುತ್ತಾ ಸೌಹಾರ್ದದ ಬದುಕು ನಡೆಸುವಂತೆ ಅವರು ಕಿವಿಮಾತು ಹೇಳಿದರು.
ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಅಲಿಕುಂಞಿ ಉಸ್ತಾದ್ ಶಿರಿಯಾ ದುವಾ ನೆರವೇರಿಸಿದರು. ಇಹ್ಸಾನ್ ಕರ್ನಾಟಕ ಇದರ ಅಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ ಮಾತನಾಡಿದರು.
ಶಸಾಕ ಮೊದಿನ್ ಬಾವ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಮನಪಾ ಕಮಿಷನರ್ ಮುಹಮ್ಮದ್ ನಝೀರ್, ಬಜ್ಪೆ ಠಾಣಾ ಪೊಲೀಸ್ ಇನ್ಸ್‌ಪಕ್ಟೆರ್ ಎಸ್.ಪರಶಿವಮೂರ್ತಿ, ಮಂಗಳೂರಿನ ಇಸ್ಲಾಮಿಕ್ ಕಲ್ಚರ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಹಳೆಯಂಗಡಿ ಬೊಳ್ಳೂರು ಜುಮಾ ಮಸೀದಿಯ ಖತೀಬ್ ಅಝ್ಗರ್ ಫೈಝಿ, ಬಜ್ಪೆ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುರ್ರಝಾಕ್ ಮದನಿ, ಪೇಜಾವರ ಎಂಜೆಎಂ ಮಸೀದಿಯ ಖತೀಬ್ ಕೆ.ಕೆ.ಅಬೂಬಕರ್ ಮುಸ್ಲಿಯಾರ್, ಮಸ್ಜಿದುರ್ರಹ್ಮಾನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಸಖಾಫಿ, ಮಸೀದಿಯ ಇಮಾಮ್ ಬದ್ರುದ್ದೀನ್ ಸಖಾಫಿ, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ, ಕಾಟಿಪಳ್ಳ ಮಿಸ್ಬಾ ಮಹಿಳಾ ಕಾಲೇಜಿನ ಟ್ರಸ್ಟಿ ಅಬ್ದುಲ್ ಹಕೀಂ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್, ಪಿಡಬ್ಲುಡಿ ಗುತ್ತಿಗೆದಾರ ಹಾಜಿ ಕೆ.ಅಬ್ಬಾಸ್, ಪೇಜಾವರ ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಚ್.ಇಬ್ರಾಹೀಂ ಬ್ಯಾರಿ, ಬಜ್ಪೆ ಎಂಜಿಎಂ ಇಸ್ಲಾಮಿಕ್ ಎಜುಕೇಶನ್ ಸೆಂಟರ್‌ನ ಅಧ್ಯಕ್ಷ ಕೆ.ಐ.ಬದ್ರುದ್ದೀನ್, ಬಜ್ಪೆ ಎಂಜಿಎಂ ಮಸೀದಿಯ ಅಧ್ಯಕ್ಷ ಹಾಜಿ ಇಸ್ಮಾಯೀಲ್ ಜಾವಳೆ, ಬಜ್ಪೆ ಎಂಜಿಎಂ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಬಿ.ಮುಹಮ್ಮದ್, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ಮಸ್ಜಿದುರ್ರಹ್ಮಾನ್ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಇಸ್ಮಾಯೀಲ್ ಎಂಜಿನಿಯರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಶಾಹುಲ್ ಹಮೀದ್, ವಕ್ಫ್ ಸಲಹಾ ಸಮಿತಿ ಸದಸ್ಯ ಖಾದರ್, ಕಂದಾವರ ಗ್ರಾ.ಪಂ. ಸದಸ್ಯ ಎಂ.ಕೆ.ಅಶ್ರಫ್, ಸೌಹಾರ್ದನಗರ ಹಿದಾಯತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಅಬ್ದುಲ್ ಅಝೀಝ್ ಪಟ್ಟಾಡಿ, ಮಸ್ಜಿದುರ್ರಹ್ಮಾನ್ ಆಡಳಿತ ಸಮಿತಿ ಅಧ್ಯಕ್ಷ ಮುಹಮ್ಮದ್ ಸಾಲಿಹ್ ಮೊದಲಾವರು ಉಪಸ್ಥಿತರಿದ್ದರು.