ಮುಲ್ಕಿ : ಎನ್ ಡಬ್ಲ್ಯೂಎಫ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Update: 2018-03-13 18:17 GMT

ಮುಲ್ಕಿ,ಮಾ.13: ನ್ಯಾಷನಲ್ ವಿಮೆನ್ಸ್ ಫ್ರಂಟ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ 'ಫ್ಯಾಶಿಸಂ ಮಹಿಳಾ ವಿರೋಧಿ, ಬನ್ನಿ ಹೋರಾಡೋಣ' ಎಂಬ ಧ್ಯೇಯ ವಾಕ್ಯದಡಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮುಲ್ಕಿ ಕಾರ್ನಾಡ್ ನ ಜೋಸೆಫ್ ಸಭಾಭವನದಲ್ಲಿ ಆಚರಿಸಲಾಯಿತು.

ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈದಾ ಯೂಸುಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ  ಸಮಿತಿ ಸದಸ್ಯೆ ಶಾಹಿದಾ ಸಂದೇಶ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಲೇಖಕಿ ಜ್ಯೋತಿ ಗುರುಪ್ರಸಾದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಆಯಿಶಾ ಯು.ಕೆ, ಕ್ಯಾಂಪಸ್ ಫ್ರಂಟ್ ಜಿಲ್ಲಾ ಕಾರ್ಯದರ್ಶಿ ಮುಫೀದಾ, ಜಿಲ್ಲಾ ಸಮಿತಿ ಸದಸ್ಯೆ ಸುಹೇನಾ ಭಾಗವಹಿಸಿದ್ದರು.

ಎನ್ ಡಬ್ಲ್ಯೂಎಫ್ ವತಿಯಿಂದ ನಡೆಸಲಾಗುತ್ತಿರುವ ಉಚಿತ ಹೊಲಿಗೆ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.  ಇದೇ ವೇಳೆ ಹೊಲಿಗೆ ತರಬೇತಿ ಶಿಕ್ಷಕಿ ಶಮೀಮಾ ಅವರನ್ನು ಸನ್ಮಾನಿಸಲಾಯಿತು. 

ಎನ್ ಡಬ್ಲ್ಯೂಎಫ್ ಜಿಲ್ಲಾಧ್ಯಕ್ಷೆ ಮೈಮೂನ ಸ್ವಾಗತಿಸಿ, ಝುಲೇಖ ವಂದಿಸಿದರು. ರಮ್ಲತ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News