ಕಲ್ಯಾಣಪುರ: ನ್ಯಾಕ್ ರಾಷ್ಟ್ರೀಯ ವಿಚಾರಗೋಷ್ಠಿ

Update: 2018-03-16 14:13 GMT

ಕಲ್ಯಾಣಪುರ,ಮಾ.16:ರಾಷ್ಟ್ರೀಯ ನ್ಯಾಕ್ ಸಂಸ್ಥೆ ನೂತನ ಮೌಲ್ಯಮಾಪನ ಪದ್ಧತಿ ಕುರಿತ ಒಂದು ದಿನದ ವಿಚಾರಗೋಷ್ಠಿ ಶುಕ್ರವಾರ ಸ್ಥಳೀಯ ಮಿಲಾಗ್ರಿಸ್ ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಮಂಗಳೂರು ವಿವಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರ ಸಂಘ ವತಿಯಿಂದ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ನಡೆಯಿತು.

ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರೊ.ಮಹೇಶ್ ರಾವ್ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ಯೋಜನಾಬದ್ಧವಾಗಿ ಕಾರ್ಯ ಪ್ರವೃತ್ತರಾಗಬೇಕಾದ ಅಗತ್ಯವನ್ನು ತಿಳಿಸಿದರು.

ವಾಣಿಜ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಪೀಟರ್ ಡಿಸೋಜ, ಆಂಗ್ಲ ಭಾಷಾ ವಿಭಾಗದ ವತಿಯಿಂದ ಪ್ರಕಟಿತ ‘ಲಿಟರರಿ ಇಕೋಸ್’ ಕೃತಿಯನ್ನು ಬಿಡುಗಡೆಗೊಳಿಸಿ, ಸಂಶೋಧನ ಗುಣವನ್ನು ಬೆಳೆಸಿಕೊಳ್ಳುವ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ತಿಳುವಳಿಕೆಯೊಂದಿಗೆ ಸಂಸ್ಥೆಯನ್ನು ಅಭಿೃದ್ಧಿಪಡಿಸಲು ಸಾಧ್ಯವಿದೆ ಎಂದರು.

ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಸ್ಯಾಮುವೆಲ್ ಕೆ ಸ್ಯಾಮುವೆಲ್ ಪ್ರಾಸ್ತಾವಿಕ ಮಾತುಗಳಾಡಿ, ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಮುಖ್ಯ ಗುರಿ ಮತ್ತು ನ್ಯಾಕ್ ಸಂಸ್ಥೆ ಇದನ್ನು ನೆಲೆಗೊಳಿಸಲು ತುಂಬಾ ಸಹಕಾರಿ ಎಂದು ನುಡಿದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ಸೈಂಟ್ ಜೋಸೆಪ್ಸ್ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಸುಬಾಷಿಣಿ ಮುತ್ತುಕೃಷ್ಣನ್ ಹಾಗೂ ಮಂಗಳೂರು ಸಂತ ಅಲೋಷಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಡೆನ್ನಿಸ್ ಫೆರ್ನಾಂಡಿಸ್ ಭಾಗವಹಿಸಿ ನ್ಯಾಕ್ ವೌಲ್ಯಮಾಪನದ ಕುರಿತು ತಿಳಿಸಿದರು.

ವೇದಿಕೆಯಲ್ಲಿ ಧವಳ ಕಾಲೇಜಿನ ಪ್ರಾಂಶುಪಾಲ್ ಹಾಗೂ ಪ್ರಾಂಶುಪಾಲ ಸಂಘದ ಕಾರ್ಯದರ್ಶಿ ಪ್ರೊ. ರವೀಶ್ ಕುಮಾರ್ ಮತ್ತು ಶಿರ್ವ ಸಂತ ಮೇರಿಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜನ್ ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಯೋಜಕ ಡಾ.ಜಯರಾಮ ಶೆಟ್ಟಿಗಾರ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅನ್ನಮ್ಮ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶೆರಿಲ್ ವಿಜಿಲಿಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News