ಮಾ.17ರಂದು ಅಲ್ ಮದೀನಾ ಸಂಸ್ಥಾಪನ ದಿನ

Update: 2018-03-16 14:28 GMT

ನರಿಂಗಾನ,ಮಾ.16: ಅಲ್ ಮದೀನಾ ಮಂಜನಾಡಿ 'ಕರ್ನಾಟಕದ ಮರ್ಕಝ್' ಎಂಬ ಹೆಗ್ಗಳಿಕೆಯ, ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಸಾರಥ್ಯದಲ್ಲಿರುವ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ವಿದ್ಯಾ ಸಮುಚ್ಚಯ ಮಂಜನಾಡಿಗೆ 24ರ ಸಂಭ್ರಮ. 1994 ಮಾರ್ಚ್ 17 ರಂದು ಸ್ಥಾಪಿಸಲ್ಪಟ್ಟ ಅಲ್ ಮದೀನಾ ನಾಳೆ 24 ಸಂವತ್ಸರವನ್ನು ಪೂರ್ಣಗೊಳಿಸಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ಸ್ಥಾಪನಾ ದಿನದ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿ ಸಂಘಟನೆ ಬಿಶಾರತುಲ್ ಮದೀನಾವು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಮುಖವಾಗಿ ಗ್ರ್ಯಾಂಡ್ ಅಸೆಂಬ್ಲಿ  ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News