ಮಣಿಪಾಲದಲ್ಲಿ ಚೆಸ್ ತರಬೇತಿ ಶಿಬಿರ
Update: 2018-03-16 21:05 IST
ಮಣಿಪಾಲ, ಮಾ.16: ಶ್ರೀಸಿದ್ದಿವಿನಾಯಕ ಚೆಸ್ ಅಕಾಡಮಿ ಮಣಿಪಾಲ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಜಂಟಿ ಆಶ್ರಯದಲ್ಲಿ ಎ.2ರಿಂದ ಮಣಿಪಾಲ ಲಕ್ಷ್ಮಿಂದ್ರನಗರದ 1ನೇ ಕ್ರಾಸ್‌ನ ರಜತದಲ್ಲಿ ಚೆಸ್ ತರಬೇತಿ ಶಿಬಿರ ಪ್ರಾರಂಭಗೊಳ್ಳಲಿದೆ.
ಅಂತಾರಾಷ್ಟ್ರೀಯ ಮಟ್ಟದ ಚೆಸ್‌ಪಟು ದೇವಿದಾಸ್ ಪೈ, ರಾಷ್ಟ್ರಮಟ್ಟದ ಚೆಸ್ ತೀರ್ಪುಗಾರ ಸಾಕ್ಷಾತ್ ಯು.ಕೆ. ಮತ್ತು ಸಂಸ್ಥೆಯ ಸಂಚಾಲಕ ಬಾಬು ಜೆ. ಪೂಜಾರಿ ತರಬೇತಿಯನ್ನು ನಡೆಸಿಕೊಡಲಿದ್ದಾರೆ. ಜಿಲ್ಲೆಯ ಉದಯೋನ್ಮುಖ ಹಾಗು ಆಸಕ್ತ ಚೆಸ್‌ಪಟುಗಳು ಈ ಅವಕಾಶವನ್ನು ಪಡೆಯಬಹುದು ಎಂದು ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ ರಾಜ್‌ಗೋಪಾಲ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ನಂ.8748029018ನ್ನು ಅಥವಾ www.udupichessassociation.com ಸಂಪರ್ಕಿಸುವಂತೆ ತಿಳಿಸಲಾಗಿದೆ.