×
Ad

ಉಡುಪಿ :ಮಾ.18ಕ್ಕೆ ರಾಜಾಂಗಣದಲ್ಲಿ ಯಕ್ಷಗಾನ ಬ್ಯಾಲೆ

Update: 2018-03-16 21:08 IST

ಉಡುಪಿ, ಮಾ.16: ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿಯಿಂದ ಡಾ.ಕೆ. ಶಿವರಾಮ ಕಾರಂತರು ನಿರ್ದೇಶಿಸಿದ ಯಕ್ಷಗಾನ ಬ್ಯಾಲೆಯ ಎರಡು ಪ್ರದರ್ಶನ ಮಾ.18 ಮತ್ತು 19ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಹಾಗೂ ಮಣಿಪಾಲದ ರೋಟರಿ ಮಣಿಪಾಲ ಹಿಲ್ಸ್ ಸಭಾಭವನದಲ್ಲಿ ನಡೆಯಲಿದೆ ಎಂದು ಕಲಾದರ್ಶಿನಿಯ ನಿರ್ದೇಶಕ ಶ್ರೀನಿವಾಸ ಸಾಸ್ತಾನ ತಿಳಿಸಿದ್ದಾರೆ.

ಮಾ.18ರ ರವಿವಾರ ಸಂಜೆ 7:00ಕ್ಕೆ ರಾಜಾಂಗಣದಲ್ಲಿ ‘ನಳ ದಮಯಂತಿ’ ಹಾಗೂ 19ರಂದು ಮಣಿಪಾಲದಲ್ಲಿ ಸಂಜೆ 6:00ಕ್ಕೆ ‘ಕನಕಾಂಗಿ ಕಲ್ಯಾಣ’ ಪ್ರಸಂಗದ ಪ್ರದರ್ಶನ ನಡೆಯಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಮ್ಮ ತಂಡ ಡಾ.ಕಾರಂತರ 4 ಪ್ರಸಂಗಗಳ ಯಕ್ಷಗಾನ ಬ್ಯಾಲೆಯನ್ನು ಮರು ನಿರ್ಮಾಣ ಮಾಡಿ ದೇಶದ ಪ್ರಮುಖ ನಗರಗಳಲ್ಲಿ ಹಾಗೂ ಅಮೆರಿಕಾದಲ್ಲಿ ಪ್ರದರ್ಶನ ನೀಡಿದೆ. ಕಾರಂತರು ನಿರ್ದೇಶಿಸಿ, ವಸ್ತ್ರವಿನ್ಯಾಸ ಮಾಡಿ ಪ್ರದರ್ಶಿಸಿದ ಬ್ಯಾಲೆಗಳಾದ ಅಭಿಮನ್ಯು ವಧೆ, ಪಂಚವಟಿ, ನಳ-ದಮಯಂತಿ ಹಾಗೂ ಕನಕಾಂಗಿ ಕಲ್ಯಾಣ ಪ್ರಸಂಗಳನ್ನು ವಿದ್ವಾನ್ ಸುಧೀರ್‌ರಾವ್ ಕೊಡವೂರು ಮರು ನಿರ್ದೇಶನ ಮಾಡಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಸಕ ಸುಧೀರ್‌ರಾವ್ ಕೊಡವೂರು, ರಾಧಾಕೃಷ್ಣ ಉರಾಳ, ಪ್ರತೀಶ್‌ಕುಮಾರ್ ಬ್ರಹ್ಮಾವರ, ಮನೋಜ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News