×
Ad

ಬೆಳ್ತಂಗಡಿ : ಗಾಂಜಾ ಮಾರಾಟ, ಸೇವನೆ - ನಾಲ್ವರ ಬಂಧನ

Update: 2018-03-16 21:11 IST
ಅಂಜುಮಾನ್, ಆದಿಲ್ ಷಾ

ಬೆಳ್ತಂಗಡಿ,ಮಾ.16: ಗಾಂಜಾ ಮಾರಾಟ ಹಾಗು ಸೇವನೆಯ ಎರಡು ಪ್ರಕರಣಗಳು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಶುಕ್ರವಾರ ದಾಖಲಾಗಿದ್ದು ನಾಲ್ವರನ್ನು ಬಂಧಿಸಲಾಗಿದೆ.

ಇಲ್ಲಿನ ಕಾಶಿಬೆಟ್ಟು ಬಸ್ ನಿಲ್ದಾಣದ ಕಟ್ಟಡದ ಹಿಂಬಾಗದಲ್ಲಿ ಗಾಂಜಾ ಸೇವಿಸುತ್ತಿದ್ದ ವೇಳೆ ಬೆಳ್ತಂಗಡಿ ಪೋಲಿಸರು ದಾಳಿ ಮಾಡಿ ಇಂದಬೆಟ್ಟಿನ ಹಾರಿಸ್ (29) ಹಾಗೂ ನಾವೂರಿನ ಸಂಶುದ್ದೀನ್(28) ಎಂಬುವರನ್ನು ಬಂಧಿಸಿದ್ದಾರೆ. ಇವರಿಂದ ಗಾಂಜಾ ಸೇವನೆಗೆ ಉಪಯೋಗಿಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕಾಲೇಜೊಂದರ ಬಳಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಣಕಲ್‍ನ ಆದಿಲ್ ಷಾ (33) ಹಾಗು ಅಂಜುಮಾನ್ (34) ಎಂಬುವರೇ ಬಂಧಿತರು. ಇವರಿಂದ 350 ಗ್ರಾಂ. ಗಾಂಜಾ, ಡಿಯೋ ಸ್ಕೂಟರ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News