×
Ad

ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ: ಸ್ಕೂಟಿ ಸವಾರ ಮೃತ್ಯು

Update: 2018-03-16 21:43 IST

ಹಿರಿಯಡ್ಕ, ಮಾ.16: ಬೊಮ್ಮಾರಬೆಟ್ಟು ಗ್ರಾಮದ ಆಶ್ಲೇಷಾ ಹೋಟೆಲ್ ಬಳಿಯ ತಿರುವಿನಲ್ಲಿ ಮಾ.15ರಂದು ಸಂಜೆ 6:30ರ ಸುಮಾರಿಗೆ ಕೆಎಸ್‌ಆರ್ ಟಿಸಿ ಬಸ್ಸೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟಿದ್ದು,ಮಗು ಸಹಿತ ಇಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಸ್ಕೂಟಿ ಸವಾರ ಸುಜಿತ್ ಆಚಾರ್ಯ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರರಾದ ಮೃತರ ಸ್ನೇಹಿತ ಮಂಜೊಟ್ಟಿ ಕೊಂಡಾಡಿಯ ದಯಾ ನಂದ ಪೂಜಾರಿ(39) ಹಾಗೂ ಅವರ ಹೆಂಡತಿ ತಂಗಿಯ ಮೂರೂವರೆ ವರ್ಷದ ಮಗು ವೈಷ್ಣವಿ ಎಂಬವರು ಗಾಯಗೊಂಡಿದ್ದಾರೆ.

ಮಂಜೊಟ್ಟಿ ಕಡೆಯಿಂದ ಹಿರಿಯಡ್ಕ ಕಡೆಗೆ ಹೋಗುತ್ತಿದ್ದ ಸ್ಕೂಟಿಗೆ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಎದುರಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸ್ಕೂಟಿ ಸಮೇತ ಮೂವರೂ ರಸ್ತೆಗೆ ಬಿದ್ದು ಸುಜಿತ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿರುವ ದಯಾನಂದ ಪೂಜಾರಿ ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ಮಗು ವೈಷ್ಣವಿ ಹಿರಿಯಡ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News