ಉಡುಪಿ : ಎಟಿಎಂ ಬಳಸಿ ಸಾವಿರಾರು ರೂ. ಹಣ ವಂಚನೆ
ಉಡುಪಿ, ಮಾ.16: ಮಣಿಪಾಲ ಐಸಿಐಸಿಐ ಬ್ಯಾಂಕಿನ ಎಟಿಎಂ ಸೆಂಟರಿ ನಲ್ಲಿ ವೃದ್ಧರೊಬ್ಬರಿಗೆ ಸಹಾಯ ಮಾಡುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಮೋಸ ದಿಂದ ಅವರ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಹಾಗೂ ವರ್ಗಾವಣೆ ಮಾಡಿ ಸಾವಿರಾರು ರೂ. ವಂಚನೆ ಎಸಗಿರುವುದಾಗಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ರಾಜ್ಯದ ಕಣ್ಣೂರಿನ ಒಝಾಕ್ರೋಮ್‌ನ ಜನಾರ್ಧನನ್(79) ಎಂಬವರು ಮಾ.10ರಂದು ಮಗಳ ಮನೆಯಾದ ಮಣಿಪಾಲಕ್ಕೆ ಬಂದಿದ್ದು, ಮಾ.12ರಂದು ಬೆಳಗ್ಗೆ 8:30ರ ಸುಮಾರಿಗೆ ಮಣಿಪಾಲದ ಬೇಸಿಕ್ ಸೈನ್ಸ್ ಕಟ್ಟಡದಲ್ಲಿರುವ ಎಟಿಎಂ ಸೆಂಟರ್‌ಗೆ ಹಣ ತೆಗೆಯಲು ಹೋಗಿದ್ದರು. ಅಲ್ಲಿ ಅವರಿಗೆ ಸರಿಯಾಗಿ ಕಾಣದೆ ಇದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದು ಹಣ ತೆಗೆಸಿಕೊಟ್ಟಿದ್ದನು. ನಂತರ ಅವರು ಕಣ್ಣೂರಿಗೆ ತೆರಳಿ ಎಸ್‌ಬಿಐ ಬ್ಯಾಂಕಿನಲ್ಲಿ ವಿಚಾರಸಿದಾಗ ಅಪರಿಚಿತ ವ್ಯಕ್ತಿ ಇವರ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಹಾಗೂ ವರ್ಗಾವಣೆ ಮಾಡಿ ಒಟ್ಟು 78,600ರೂ. ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.