'ನವೀಕರಿಸಬಹುದಾದ ಶಕ್ತಿಯ ವ್ಯವಸ್ಥೆಗಳು' ವಿಚಾರ ಸಂಕಿರಣ
Update: 2018-03-16 22:20 IST
ನಡುಪದವು,ಮಾ.16: ಪಿ.ಎ ಪಾಲಿಟೆಕ್ನಿಕ್ ನಡುಪದವಿನಲ್ಲಿ 'ನವೀಕರಿಸಬಹುದಾದ ಶಕ್ತಿಯ ವ್ಯವಸ್ಥೆಗಳು' ಎಂಬ ವಿಷಯದ ಕುರಿತಾಗಿ ವಿಚಾರ ಸಂಕಿರಣ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಶ್ಲೀಬಾ ಮ್ಯಾಥ್ಯೂರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ನವೀಕರಿಸಬಹುದಾದ ವಿವಿಧ ಸಂಪನ್ಮೂಲಗಳ ಕುರಿತು ವಿಸ್ತೃತವಾಗಿ ವಿವರಿಸಿದರು.
ಪ್ರಾಂಶುಪಾಲರಾದ ಪ್ರೊ.ಕೆ.ಪಿ ಸೂಫಿಯವರು ಮಾತನಾಡಿ ಶುದ್ಧ ಹಾಗೂ ನವೀಕರಿಸಬಹುದಾದ ಶಕ್ತಿಯ ಮೂಲ ಹಾಗೂ ಅದರಿಂದ ಜಾಗತಿಕ ತಾಪಮಾನ ಇಳಿಕೆಯ ಕುರಿತು ಗಮನಹರಿಸುವಂತೆ ಹೇಳಿದರು.
ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇದರ ವಿಭಾಗ ಮುಖ್ಯಸ್ಥರಾದ ಪ್ರೊ.ಅಜಿತ್ ಕುಮಾರ್ ವಾಸು ಅವರು ಅಥಿತಿಗಳನ್ನು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಪ್ರೊ.ಶಶಿಧರ ಅವರು ಅಥಿತಿಗಳ ವ್ಯಕ್ತಿಪರಿಚಯ ಮಾಡಿದರು.ಪ್ರಾಧ್ಯಾಪಕಿ ಕುಮಾರಿ ಫಮೀಝಕಾರ್ಯಕ್ರಮ ನಿರೂಪಿಸಿದರು, ಪ್ರಾಧ್ಯಾಪಕಿ ದೀಪಾ ವಂದಿಸಿದರು.