ವಿದ್ಯಾರ್ಥಿಗಳಿಗಾಗಿ ಕೋರ್ಪೊರೇಶನ್ ಬ್ಯಾಂಕ್‌ನಿಂದ ಉಚಿತ ಆರೋಗ್ಯ ಶಿಬಿರ ಆಯೋಜನೆ

Update: 2018-03-16 17:23 GMT

ಮಂಗಳೂರು, ಮಾ.16: ತನ್ನ 113ನೇ ಸ್ಥಾಪನಾ ದಿನದ ಪ್ರಯುಕ್ತ ಕೋರ್ಪೊರೇಶನ್ ಬ್ಯಾಂಕ್ ಮಾರ್ಚ್ 9ರಂದು ಇಲ್ಲಿನ ಬೆಂಗ್ರೆಯಲ್ಲಿರುವ ಸರಕಾರಿ ಪ್ರೌಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿತ್ತು. ಅತ್ತಾವರದಲ್ಲಿರುವ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ಈ ಶಿಬಿರವನ್ನು ಕೋರ್ಪೊರೇಶನ್ ಬ್ಯಾಂಕ್‌ನ ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನ (ರಿ) ಆಯೋಜಿಸಿತ್ತು.

ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಇ.ಎಸ್ ನಾಗರಾಜ ಉಡುಪು ದೀಪ ಬೆಳಗುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಕ್ಕಳಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡುವ ಪ್ರಾಮುಖ್ಯತೆಯನ್ನು ವಿವರಿಸಿದರು. ಜೊತೆಗೆ ನಮ್ಮ ಸುತ್ತಮುತ್ತಲು ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿಕೊಂಡರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮತ್ತು ಬ್ಯಾಂಕ್‌ನ ಮಂಗಳೂರು ವಲಯದ ಮುಖ್ಯಸ್ಥ ಎ.ಕೆ ವಿನೋದ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಎ.ಎನ್ ರವಿಶಂಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News