ಬಜಾಲ್ ಜಲ್ಲಿಗುಡ್ಡೆಯ ಏನೆಲ್ಮಾರ್ ರಸ್ತೆ ಅಭಿವೃದ್ಧಿಗೆ ಚಾಲನೆ
ಮಂಗಳೂರು, ಮಾ.19: ನಗರದ ಬಜಾಲ್ ಜಲ್ಲಿಗುಡ್ಡೆಯ ಏನೆಲ್ಮಾರ್ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಜೆ.ಆರ್.ಲೋಬೊ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ರಸ್ತೆಯ ಅಭಿವೃದ್ಧಿಗೆ 1 ಕೋ.ರೂ. ಅನುದಾನ ಮಂಜೂರಾತಿ ಆಗಿದೆ. ಸುಮಾರು 850 ಮೀ. ಉದ್ದದ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿಸಬಹುದು. ಸುಮಾರು 8 ಕೋ.ರೂ. ಅನುದಾನವನ್ನು ನಗರದ ವಿವಿಧ ಕಡೆಗಳ ರಸ್ತೆ ಅಭಿವೃದ್ಧಿಗಳಿಗೆ ರಾಜ್ಯದ ಲೋಕೊಪಯೋಗಿ ಇಲಾಖೆ ಈಗಾಗಲೇ ಬಿಡುಗಡೆಗೊಳಿಸಿದೆ. ಮುಂದಿನ ಮಳೆಗಾಲದ ಒಳಗೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಲೋಕರ್ಪಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಸುಮಯ್ಯ ಅಶ್ರಫ್, ರಾಜ್ಯ ಪ್ರವಾಸೋದ್ಯಮ ನಿಗಮದ ನಿರ್ದೇಶಕ ಅಬ್ದುಲ್ ಹಮೀದ್ ಕಣ್ಣೂರು, ಎಪಿಎಂಸಿ ಸದಸ್ಯ ಭರತೇಶ್ ಅಮೀನ್, ಕಾಂಗ್ರೆಸ್ ಮುಖಂಡರಾದ ಅಶ್ರಫ್ ಬಜಾಲ್, ಆನಂದ ರಾವ್, ಹನೀಫ್, ಅಹಮ್ಮದ್ ಬಾವಾ, ಅಬೂಬಕರ್ ಬಜಾಲ್, ಹರಿಪ್ರಸಾದ್ ಹಾಗೂ ಲೋಕೊಪಯೋಗಿ ಇಲಾಖೆಯ ಇಂಜಿನಿಯರ್‌ಗಳಾದ ರವಿಕುಮಾರ್, ದಾಸ್ ಪ್ರಕಾಶ್ ಉಪಸ್ಥಿತರಿದ್ದರು.