×
Ad

​ಸುಲ್ತಾನ್ ಬತ್ತೇರಿ-ಕಂಡತ್ತಪಳ್ಳಿ ರಸ್ತೆ ಅಭಿವೃದ್ಧಿಗೆ ಚಾಲನೆ

Update: 2018-03-19 17:49 IST

ಮಂಗಳೂರು, ಮಾ.19: ನಗರದ ಬೋಳೂರು ಸುಲ್ತಾನ್ ಬತ್ತೇರಿಯಿಂದ ಬಂದರ್ ಕಂಡತ್ತಪಳ್ಳಿವರೆಗಿನ ರಸ್ತೆಯ ಕಾಂಕ್ರಿಟೀಕರಣಕ್ಕೆ ಶಾಸಕ ಜೆ.ಆರ್.ಲೊಬೊ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನದಿ ತೀರದ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಲೋಕೊಪಯೋಗಿ ಇಲಾಖೆಯಿಂದ 3ಕೋ.ರೂ. ಮಂಜೂರಾತಿಯಾಗಿದೆ. ಸುಮಾರು 1.50 ಕಿ.ಮೀ ಉದ್ದದ ರಸ್ತೆಯನ್ನು ಈ ಅನುದಾನದಿಂದ ಕಾಂಕ್ರಿಟೀಕರಣಗೊಳಿಸಲಾಗುವುದು. ಇದಕ್ಕೆ ಪೂರಕವಾಗಿ ಸುಲ್ತಾನ್ ಬತ್ತೇರಿಯಿಂದ ಈ ರಸ್ತೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಲು 1.25 ಕೋ.ರೂ. ಅನುದಾನ ದೊರೆತಿದೆ. ಸುಮಾರು 540 ಕಿ.ಮೀ ಉದ್ದಕ್ಕೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ಸಂದರ್ಭ ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಕೆ.ಎಸ್. ಮುಹಮ್ಮದ್ ಮಸೂದ್, ಬೊಕ್ಕಪಟ್ಣ ಚರ್ಚ್‌ನ ಧರ್ಮಗುರು ಫಾ.ವಿಲ್ಫ್ರೆಡ್ ಅಮ್ಮಣ್ಣ, ಮನಪಾ ಲೆಕ್ಕಪತ್ರ ಸಮಿತಿಯ ಅಧ್ಯಕ್ಷೆ ಲತಾ ಸಾಲ್ಯಾನ್, ಕಾರ್ಪೊರೇಟರ್ ಲತೀಫ್ ಕಂದಕ್, ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲ್ಯಾನ್ , ದ.ಕ.ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ದೀಪಕ್ ಶ್ರೀಯಾನ್, ಕಾಂಗ್ರೆಸ್ ಮುಖಂಡರಾದ ಸತೀಶ್ ಪೆಂಗಲ್, ಶಂಶುದ್ದೀನ್, ಮೋಹನ್ ಶೆಟ್ಟಿ, ಜಯರಾಜ್ ಕೋಟ್ಯಾನ್, ಡಿ.ಎಂ.ಮುಸ್ತಫ, ಬಿ.ಪಿ.ಆಚಾರ್, ಸಲೀಂ ಕುದ್ರೋಳಿ, ಅನ್ವರ್ ರೀಕೊ, ಇಮ್ರಾನ್, ಯೂಸುಫ್ ಉಚ್ಚಿಲ, ಲೋಕೊಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ರವಿಕುಮಾರ್, ದಾಸ್‌ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News