×
Ad

ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ : ವಾರ್ಡನ್‍ಗಳ ದಸ್ತಗಿರಿ, ತನಿಖೆ ಪ್ರಾರಂಭ

Update: 2018-03-19 19:24 IST

ಮೂಡುಬಿದಿರೆ, ಮಾ.19: ಹಾಸ್ಟೆಲ್‍ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳಿಗೆ ಥಳಿಸಿದ ಆರೋಪದಲ್ಲಿ ಆಳ್ವಾಸ್‍ನ ಮೂವರು ಹಾಸ್ಟೆಲ್ ವಾರ್ಡನ್‍ಗಳನ್ನು ಪೊಲೀಸರು ಸೋಮವಾರ ದಸ್ತಗಿರಿ ಮಾಡಿದ್ದಾರೆ.

ಖಾದರ್.ಕೆ, ರಾಜೇಶ್ ಮತ್ತು ನಾಗೇಶ್ ಬಂಧಿತ ವಾರ್ಡನ್‍ಗಳು. ಹಲ್ಲೆಗೊಳಗಾದ ವಿದ್ಯಾರ್ಥಿ ಪ್ರಜ್ವಲ್ ರಾವ್ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಾರ್ಡನ್‍ಗಳನ್ನು ಸೋಮವಾರ ಮೂಡುಬಿದಿರೆ ಕೋರ್ಟ್‍ಗೆ ಹಾಜರುಪಡಿಸಲಾಗಿದೆ. 

ಕಾಲೇಜಿನ ಪುಷ್ಪಗಿರಿ ಹಾಸ್ಟೆಲಿನಲ್ಲಿದ್ದ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಖುಷಿಯಿಂದ ಸಂಭ್ರಮ ಆಚರಿಸುತ್ತಿದ್ದರು ಎನ್ನಲಾಗಿದೆ. ಇದನ್ನು ವಿರೋಧಿಸಿ ವಾರ್ಡನ್ ರಾಜೇಶ್ ಮತ್ತಿತರ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು.

ಆದರೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಖುಷಿಯಲ್ಲಿ ಶನಿವಾರ ರಾತ್ರಿ ಆಳ್ವಾಸ್‍ನ ಪುಷ್ಪಗಿರಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳು ಕಾಲೇಜು ನಿಯಮವನ್ನು ಉಲ್ಲಂಘಿಸಿ ಪಟಾಕಿ ಸಿಡಿಸಿ, ಕೇಕೆ ಹಾಕಿ ಸಂಭ್ರಮಿಸಿ ಅಶಿಸ್ತಿನಿಂದ ವರ್ತಿಸಿದ್ದರು ಇದನ್ನು ಪ್ರಶ್ನಿಸಿದ ವಾರ್ಡನ್‍ಗಳನ್ನು ವಿದ್ಯಾರ್ಥಿಗಳು ಬೆದರಿಸಿದ್ದರು ಎಂದೂ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News