×
Ad

ಪುತ್ತೂರಿನಲ್ಲಿ ಗುಡುಗು ಸಹಿತ ಗಾಳಿಮಳೆ : ಅಪಾರ ಹಾನಿ

Update: 2018-03-19 19:47 IST

ಪುತ್ತೂರು,ಮಾ.1: ಪುತ್ತೂರಿನಲ್ಲಿ ಸೋಮವಾರ ಸಂಜೆ ಗಾಳಿ, ಗುಡುಗು ಸಹಿತ ಬಿರುಸಿನ ಮಳೆ ಸುರಿದಿದ್ದು,  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಾತ್ಕಾಲಿಕ ಅನ್ನಛತ್ರ ಮತ್ತು ದೇವಳದ ಮುಂಭಾಗದಲ್ಲಿರುವ ಪಂಚಾಕ್ಷಕರಿ ಮಂಟಪದಲ್ಲಿ ವ್ಯವಹರಿಸುತ್ತಿದ್ದ ಕ್ರಾಫ್ಟ್ ಮೇಳಕ್ಕೆ ಅಳವಡಿಸಿದ ತಗಡು ಶೀಟುಗಳಿಗೆ ಹಾನಿಯುಂಟಾಗಿದೆ.

ದೇವಳದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ತಗಡು ಹಾಸಿ ನಿರ್ಮಾಣ ಮಾಡಿರುವ ಅನ್ನಛತ್ರ ಒಂದು ಭಾಗ ಪೂರ್ಣ ಬಿದ್ದು ಹೋಗಿದೆ. ಇತ್ತೀಚೆಗೆ ದೇವಳದ ಗದ್ದೆಯಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವ್ಯವಹಾರಿಸುತ್ತಿರುವ ಕ್ರಾಫ್ಟ್ ಮೇಳಕ್ಕೂ ಅಳವಡಿಸಿದ ಸೈಟ್ ತಗಡು ಶೀಟುಗಳಿಗೆ ಹಾನಿಯಾಗಿದೆ.
ತಾಲೂಕಿನ ಎಲ್ಲಾ ಪ್ರದೇಶದಲ್ಲಿಯೂ ಬಿರುಸಿನ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News