×
Ad

ಬಿಜೆಪಿ-ಕಾಂಗ್ರೆಸ್ ರಹಿತ ನೂತನ ಐಕ್ಯರಂಗ: ಮಮತಾ ಬ್ಯಾನರ್ಜಿ, ಕೆಸಿಆರ್

Update: 2018-03-19 20:52 IST

ಹೊಸದಿಲ್ಲಿ, ಮಾ.19: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ರಹಿತ ಹೊಸ ‘ಐಕ್ಯರಂಗ’ವೊಂದರ ಸ್ಥಾಪನೆಯ ಆಶಯ ವ್ಯಕ್ತಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ವೇಳೆ ಈ ಐಕ್ಯರಂಗವು ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ.

“2019ರ ಚುನಾವಣೆಗೂ ಮುನ್ನ ಮತ್ತೊಂದು ರಂಗವನ್ನು ಜನರು ನಿರೀಕ್ಷಿಸುತ್ತಿದ್ದಾರೆ. ಭಾರತದ ಜನರಿಗಾಗಿ ಈ ಐಕ್ಯರಂಗ ಎಂದು ನಾನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ಇದು ಕೇವಲ ರಾಜಕೀಯ ಪಕ್ಷಗಳ ಮೈತ್ರಿಯಾಗಿರುವುದಿಲ್ಲ. ಇದು ಜನರಿಗಾಗಿ” ಎಂದು ರಾವ್ ಹೇಳಿದರು,

ಕೊಲ್ಕತ್ತಾದಲ್ಲಿ ಭೇಟಿಯಾದ ನಂತರ ಸುಮಾರು 1 ಗಂಟೆಗಳ ಮಾತುಕತೆಯ ಬಳಿಕ ರಾವ್ ಈ ಬಗ್ಗೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News