ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ
Update: 2018-03-19 21:06 IST
ಮಂಗಳೂರು, ಮಾ. 19: ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ಮಧುಸೂದನ ಆಯರ್,ಲೋಕೇಶ ಕುತ್ತಾರ್, ಸತೀಶ, ದಯಾನಂದ ವಳಚಿಲ, ಮಂಜುನಾಥ ಅಡ್ಯಾರ್ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಸರಕಾರವು ಹಜ್ ಯಾತ್ರಿಗಳಿಗೆ ವಿಮಾನ ಬಾಡಿಗೆ ಕಡಿಮೆ ಮಾಡುವ ವಿಚಾರವನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು. ಅಲ್ಲದೆ ಹೈದರಾಬಾದ್‌ನ ಬಾರಾಪುರದಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಮನೆಗಳನ್ನು ನಿರ್ಮಿಸಿಕೊಡುವ ಅನುಮತಿಯನ್ನು ರದ್ದು ಪಡಿಸಿ ಅವರನ್ನು ತಕ್ಷಣ ದೇಶದಿಂದ ಹೊರಗೆ ಹಾಕಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು.