×
Ad

ಮಾ.20: ಪಡುಬಿದ್ರಿಯಲ್ಲಿ ರಾಹುಲ್‍ಗಾಂಧಿ ಜನಾಶೀರ್ವಾದ ಯಾತ್ರೆ

Update: 2018-03-19 21:19 IST

ಪಡುಬಿದ್ರಿ,ಮಾ.19: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಜನಾಶೀರ್ವಾದ ಯಾತ್ರೆಯ ಪ್ರಯುಕ್ತ ಪಡುಬಿದ್ರಿಗೆ ಆಗಮಿಸಲಿದ್ದಾರೆ. ಈಗಾಗಲೇ ಭದ್ರತಾ ಸಿಬ್ಬಂಧಿಗಳು ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಭದ್ರತಾ ಸಿಬ್ಬಂದಿಗಳು ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. 

ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 10 ಗಂಟೆಗೆ ತೆಂಕ ಎರ್ಮಾಳಿಗೆ ಆಗಮಿಸಿ ಅಲ್ಲಿರುವ ರಾಜೀವ ಗಾಂಧಿ ನ್ಯಾಶನಲ್ ಅಕಾಡೆಮಿ ಆಪ್ ಪೊಲಿಟಕಲ್ ಎಜ್ಯುಕೇಶನ್ ಕಟ್ಟಡವನ್ನು ಉದ್ಘಾಟಿಸುವರು, ಬಳಿಕ ಕಾಂಗ್ರೆಸ್ ಸೇವಾದಳ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲಿ ಸುಮಾರು 45 ನಿಮಿಷಗಳ ಕಾರ್ಯಕ್ರಮವಿದ್ದು, ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಲಾಗಿದೆ. ಎರ್ಮಾಳಿನಿಂದ ರಸ್ತೆ ಮೂಲಕ ರೋಡ್ ಶೋ ಮೂಲಕ ಪಡುಬಿದ್ರಿಗೆ ಆಗಮಿಸಲಿದ್ದು. ಪಡುಬಿದ್ರಿಯಲ್ಲಿ ಸಭೆ ನಡೆಯಲಿದೆ. ಸಭೆ ಮುಗಿದ ಬಳಿಕ  ರಾಹುಲ್ ಗಾಂಧಿ ಅವರಿಗೆ ಹೆಜಮಾಡಿಯ ಬಿಲ್ಲವ ಸಂಘದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಮುಲ್ಕಿ ಮೂಲಕ ಮಂಗಳೂರಿಗೆ ತೆರಳಲಿದ್ದಾರೆ. 

ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಗ್ರಾಮ ಪಂಚಾಯ್ತಿ ಕಟ್ಟಡದ ಎದುರು ನಡೆಯಲಿರುವ ಕಾರ್ನರ್ ಮೀಟಿಂಗ್ ನಡೆಯಲಿದ್ದು, ಬೃಹತ್ ಪೆಂಡಾಲ್ ಹಾಕಲಾಗಿದೆ. ಸುಮಾರು 10ಸಾವಿರ ಮಂದಿ ಕುಳಿತುಕೊಳ್ಳಬಹುದಾಗಿದ್ದು, ಕಾರ್ಯಕ್ರಮದಲ್ಲಿ ಸುಮಾರು 15ಸಾವಿರ ಜನ ಸೇರುವ ನಿರೀಕ್ಷೆ ಇದೆ. 

ಎರ್ಮಾಳಿನ ಸರಕಾರಿ ಪ್ರೌಢಶಾಲೆಯ ವಿಶಾಲವಾದ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಕಳೆದ ಎರಡು ದಿನಗಳಿಂದ ಹೆಲಿಪ್ಯಾಡ್‍ಗಾಗಿ ಕೆಲಸದಲ್ಲಿ ನಿರತರಾಗಿದ್ದು, ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡಿರುವ ಎಸ್‍ಪಿಜಿ ತಂಡದ ಮಾರ್ಗದರ್ಶನದಂತೆ ಸಿದ್ದತೆಗಳು ನಡೆದಿದ್ದು, ಉಡುಪಿ ಜಿಲ್ಲಾ ಪೊಲೀಸರು ಅವರಿಗೆ ಸಹಕರಿಸುತ್ತಿದ್ದಾರೆ. ರಾಹುಲ್ ಗಾಂಧಿ ಭಾಗವಹಿಸುವ ಕಾರ್ಯಕ್ರಮಗಳ ಸ್ಥಳಗಳಲ್ಲಿ ಸೋಮವಾರ ಹಲವಾರು ಬಾರಿ ಭದ್ರತಾ ವ್ಯವಸ್ಥೆಯನ್ನು ಎಸ್‍ಪಿಜಿ ತಂಡ ಪರಿಶೀಲಿಸಿದೆ. ಸೋಮವಾರ ಸಂಜೆ ಉಡುಪಿ ಜಿಲಲಾ ಪೊಲೀಸರು ಹಾಗೂ ಎಸ್‍ಪಿಜಿ ತಂಡ ರಸ್ತೆಯಲ್ಲಿ ರಿಹರ್ಸಲ್ ನಡೆಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News