ಮಾದಕ ದ್ರವ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಸಚಿವ ಖಾದರ್ ಚಾಲನೆ
Update: 2018-03-19 22:02 IST
ಮಂಗಳೂರು, ಮಾ. 19: ಸುನ್ನೀ ಸಂದೇಶ ಮಾಸ ಪತ್ರಿಕೆಯ 16ನೆ ವಾರ್ಷಿಕ ಮಹಾ ಸಂಭ್ರಮ, ಎಸ್‌ಕೆಎಸ್‌ಎಸ್‌ಎಫ್ ಬೆಳ್ಮ ರೆಜಾಾಡಿ ಶಾಖೆಯ 18ನೆ ವಾರ್ಷಿಕ ಸಂಭ್ರಮ ಹಾಗೂ ಇಮಾಮ್ ಶಾಫಿಈ ಅಕಾಡಮಿ ಕುಂಬಳೆ ಇದರ ದಶವಾರ್ಷಿಕ ಪ್ರಚಾರ ಸಮ್ಮೇಳನದ ಪ್ರಯುಕ್ತ ಮಾ. 15ರಿಂದ 25ರ ತನಕ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.
ಸುನ್ನೀ ಸಂದೇಶ ಕಚೇರಿಯಲ್ಲಿ ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷ ಹಾಜಿ ಎಂ.ಎ. ಅಬ್ದುಲ್ಲ ಬೆಳ್ಮ ರೆಂಜಾಡಿ ಅವರು ಕಿರುಹೊತ್ತಿಗೆಯನ್ನು ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಬ್ದುರ್ರಹ್ಮಾನ್ ಫೈಝಿ, ಮುಸ್ತಫ ಫೈಝಿ ಕಿನ್ಯ, ಮುಹಮ್ಮದ್, ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿ ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.