×
Ad

​ಮಂಗಳೂರು : ಗ್ರಾಪಂಗಳಿಗೆ ಏಕರೂಪದ ಸ್ವಚ್ಛತಾ ನೀತಿ

Update: 2018-03-20 17:45 IST

ಮಂಗಳೂರು,ಮಾ.20: ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯೆಂದು ಘೋಷಿಸಲ್ಪಟ್ಟ ದ.ಕ.ಜಿಪಂ ವ್ಯಾಪ್ತಿಯಲ್ಲಿ ನೈರ್ಮಲ್ಯದಡಿ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಜಿಲ್ಲೆಯ ಎಲ್ಲಾ 230 ಗ್ರಾಪಂಗಳಲ್ಲಿ ಏಕರೂಪದ ಸ್ವಚ್ಛತಾ ನೀತಿ ಅನುಸರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ 2017-18ನೇ ಸಾಲನ್ನು ಸ್ವಚ್ಛತಾ ವರ್ಷಾಚರಣೆಯನ್ನಾಗಿ ಒಡಿಎಫ್ ಪ್ಲಸ್ ಚಟುವಟಿಕೆಗಳ ಮೂಲಕ ಜನರ ವರ್ತನಾ ಮನೋಭಾವದಲ್ಲಿ ಬದಲಾವಣೆ ಮೂಡಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ವಿನೂತನ ಕಾರ್ಯಕ್ರಮಗಳಲ್ಲಿ ಸ್ವಚ್ಛತೆಯ ಮಹತ್ವ ಸಾರುವ ಸ್ವಚ್ಛತಾ ಗೀತೆಯನ್ನು ಮೊಳಗಿಸುವ ಕರೆಗಂಟೆಗಳನ್ನು ಪ್ರಾಯೋಗಿಕವಾಗಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಇವರಿಂದ ವಿನ್ಯಾಸಗೊಳಿಸಿ, ದ.ಕ.ಜಿಪಂ ಅಧಿಕಾರಿಗಳ ಕೊಠಡಿಗಳಲ್ಲಿ ಅಳವಡಿಸಲಾಗಿರುತ್ತದೆ. ದ.ಕ.ಜಿಪಂ, ಕಳ್ಳಿಗೆ ಗ್ರಾಪಂ ವ್ಯಾಪ್ತಿಯ 1,127 ಮನೆಗಳಿಗೆ ಅಳವಡಿಸುವ ಗುರಿಯನ್ನು ಹೊಂದಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಸ್ವಚ್ಛತಾ ಗೀತೆಯನ್ನು ಕಾಲಿಂಗ್‌ಬೆಲ್ನಲ್ಲಿ ಮೊಳಗಿಸಿ ಮನೆಗಳಲ್ಲಿ ಸ್ವಚ್ಛತಾ ಜಾಗೃತಿಯನ್ನು ಮೂಡಿಸುವ ಮೂಲಕ ಸಾರ್ವಜನಿಕರ ಮನೋಭಾವದಲ್ಲಿ ಬದಲಾವಣೆಯನ್ನು ತರುವ ಪ್ರಯತ್ನ ಈ ಅಭಿಯಾನದ್ದಾಗಿರುತ್ತದೆ.

ಕಾಲಿಂಗ್‌ಬೆಲ್ಗಳಿಗೆ ತಲಾ 250 ರೂ. ತಯಾರಿಕಾ ವೆಚ್ಚ ತಗಲಿದ್ದು ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜು ಅಡ್ಯಾರು ಇವರು ಇದರ ಪ್ರಾಯೋಜಕತ್ವ ವಹಿಸಿದ್ದಾರೆ. ಕಳ್ಳಿಗೆ ಗ್ರಾಪಂನ ಎಲ್ಲ ಮನೆ, ಶಾಲೆ, ಅಂಗನವಾಡಿ ಕೇಂದ್ರಗಳಿಗೆ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಸರಕಾರಿ ಕಚೇರಿಗಳಲ್ಲಿ ಮತ್ತು ಕೆಲವು ಮಾದರಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಲಾಗುತ್ತಿದೆ ಎಂದು ಜಿಲ್ಲಾ ಸಂಯೋಜಕರು, ಸ್ವಚ್ಛ ಭಾರತ್ ಮಿಷನ್, ಜಿಲ್ಲಾ ನೆರವು ಘಟಕ ದ.ಕ.ಜಿಪಂ ಮಂಗಳೂರು ಇವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News