ಮಂಗಳೂರು : ರಾಹುಲ್ ಗಾಂಧಿ ರೋಡ್ ಶೋ ಆರಂಭ

Update: 2018-03-20 18:09 GMT

ಮಂಗಳೂರು,ಮಾ.20 : ಸುರತ್ಕಲ್ ನಿಂದ ಆಗಮಿಸಿದ ರಾಹುಲ್ ಗಾಂಧಿ ಅವರು ಸರ್ಕ್ಯೂಟ್ ಹೌಸ್ ನಲ್ಲಿ ಕೆಲವು ನಿಮಿಷ ಕಾಲ ವಿಶ್ರಾಂತಿ ಪಡೆದು ನಂತರ ನಗರದ ಜ್ಯೋತಿ ವೃತ್ತದಿಂದ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.

ತೆರೆದ ವಾಹನದಲ್ಲಿ ಭಾರೀ ಜನಸ್ತೋಮದ ನಡುವೆ ಸಾಗಿದ ಅವರು ಸುತ್ತಮುತ್ತಲೂ ನೆರೆದಿದ್ದ ಸಾವಿರಾರು ಜನರತ್ತ ಕೈಬೀಸಿದರು.

ನಂತರ ಯಾತ್ರೆ ನೆಹರೂ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಸಾಗಿತು. ಈ ಸಂದರ್ಭ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News