ಬಿಜೆಪಿ ಜೊತೆಗಿನ ಸಂಪರ್ಕದ ಬಗ್ಗೆ ರಜಿನಿಕಾಂತ್ ಹೇಳಿದ್ದೇನು ?

Update: 2018-03-20 14:27 GMT

ಚೆನ್ನೈ, ಮಾ.20: ತನಗೆ ಬಿಜೆಪಿ ಬೆಂಬಲವಿದೆ ಎಂಬ ವರದಿಯನ್ನು ನಿರಾಕರಿಸಿರುವ ರಜಿನೀಕಾಂತ್ ತನಗೆ ಇರುವ ಬೆಂಬಲವೆಂದರೆ ಅದು ದೇವರು ಹಾಗೂ ಜನತೆಯದ್ದು ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿದ ನಟ, ಇದೀಗ ರಾಜಕಾರಣಿಯಾಗಿ ಪರಿವರ್ತಿತರಾಗಿರುವ ರಜಿನೀಕಾಂತ್, ತನಗೆ ಬಿಜೆಪಿಯ ಬೆಂಬಲವಿದೆಯೇ ಎಂಬ ಪ್ರಶ್ನೆಯನ್ನು ಹಲವಾರು ಬಾರಿ ಕೇಳಲಾಗಿದೆ. ಆದರೆ ಎಷ್ಟು ಬಾರಿ ಕೇಳಿದರೂ ಉತ್ತರದಲ್ಲಿ ಬದಲಾವಣೆಯಿಲ್ಲ. ತನಗಿರುವ ಬೆಂಬಲ ದೇವರದ್ದು ಮತ್ತು ಜನತೆಯದ್ದು ಎಂದರು. ಅಲ್ಲದೆ ಪೆರಿಯಾರ್ ಪ್ರತಿಮೆಯನ್ನು ದ್ವಂಸಗೊಳಿಸಿದ ಘಟನೆ ಅನಾಗರಿಕ ವರ್ತನೆ ಎಂದು ರಜನಿ ಹೇಳಿದರು.

ವಿವಾದಾಸ್ಪದ ರಾಮರಾಜ್ಯ ರಥ ಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡು ಜಾತ್ಯಾತೀತ ರಾಜ್ಯವಾಗಿದೆ. ಪೊಲೀಸರು ಕೋಮು ಸೌಹಾರ್ದತೆ ಕಾಪಾಡುತ್ತಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದರು. 2021ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನೂತನ ಪಕ್ಷ ಸ್ಥಾಪಿಸಿ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ರಜನೀಕಾಂತ್ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News