ಕುಂದಾಪುರ : ಮನೆಗೆ ನುಗ್ಗಿ 4.80ಲಕ್ಷ ಮೌಲ್ಯದ ಸೊತ್ತು ಕಳವು

Update: 2018-03-20 16:07 GMT

ಕುಂದಾಪುರ, ಮಾ.20: ಕೋಟೇಶ್ವರ ರಾಜಲಕ್ಷ್ಮೀ ಪೆಟ್ರೋಲ್ ಬಂಕ್ ಎದುರಿನ ಮನೆಯೊಂದಕ್ಕೆ ಮಾ.19ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಸುಬ್ಬಣ್ಣ ಶೆಟ್ಟಿ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನ ಸೆಂಟರ್ ಲಾಕ್‌ನ್ನು ಮೀಟಿ ತೆರೆದು ಅದರೊಳಗಿದ್ದ 50 ಸಾವಿರ ರೂ. ನಗದು, ಒಟ್ಟು 4,00,000ರೂ. ಮೌಲ್ಯದ ಆರು ಪವನ್ ತೂಕದ 4 ಚಿನ್ನದ ಬಳೆಗಳು, ಎರಡುವರೆ ಪವನ್ 2 ಕರಿಮಣಿ ಸರ, ನಾಲ್ಕು ಚಿನ್ನದ ಉಂಗುರಗಳು, 30,000ರೂ. ಮೌಲ್ಯದ ಒಂದುವರೆ ಕೆ.ಜಿ ತೂಕದ ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿದ್ದಾರೆ. ಇವುಗಳ ಒಟ್ಟು ವೌಲ್ಯ 4,80,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News